ಗೋರಕ್ಷಕನನ್ನು ಬಂಧಿಸಿದ ಆರಕ್ಷಕರು.. ಆತ ಮಾಡಿದ್ದೇನು...?

shoot 1
Published on

ಅಂಬಾಲಾ: ಟ್ರಕ್ ಚಾಲಕರಿಂದ 50,000 ರೂ. ಕಿತ್ತುಕೊಂಡು ಆತನ ಮೇಲೆ ಹಲ್ಲೆ ನಡೆಸಿದ ಘಟನೆ ಶುಕ್ರವಾರ ನಡೆದಿದೆ.

ಆರೋಪಿ ಅಜಯ್ ಚಾವ್ಲಾ 'ಮೋನು' ಅಂಬಾಲಾದ ಲಜಪತ್ ನಗರದ ನಿವಾಸಿ, ಶ್ರೀ ಕೃಷ್ಣ ಗೋವು ಸೇವಾ ಸಂಘದ ಅಧ್ಯಕ್ಷ. ಸಂತ್ರಸ್ತನನ್ನು ವಿಶಾಲ್ ಠಾಕೂರ್ ಎಂದು ಗುರುತಿಸಲಾಗಿದೆ.

ನಡೆದದ್ದೇನು? : ವಿಶಾಲ್ ಶುಕ್ರವಾರ ತನ್ನ ಸ್ನೇಹಿತನೊಂದಿಗೆ ಕರ್ನಾಲ್​​ನ ತರೌರಿ ತರಕಾರಿ ಮಾರುಕಟ್ಟೆಗೆ ಟೊಮ್ಯಾಟೊ ಮಾರಾಟಕ್ಕೆ ಹೋಗಿದ್ದ. ಅಲ್ಲಿ 50 ಸಾವಿರ ರೂ. ವ್ಯವಹಾರ ನಡೆದಿತ್ತು. ಅಲ್ಲಿಂದ ಇಬ್ಬರೂ ವಾಪಸ್ ಬರುತ್ತಿದ್ದರು.

ಶುಕ್ರವಾರ ಬೆಳಗಿನ ಜಾವ 4 ಗಂಟೆಗೆ, ಸೇತುವೆಯ ಕೆಳಗೆ ವಾಹನವೊಂದು ನಿಂತಿರುವುದನ್ನು ಗಮನಿಸಿ ಶಹಾಬಾದ್​​ನ ಬರಾರಾ ಚೌಕ್ ಹತ್ತಿರ ಬಂದರು.

ಮೇಲ್ಭಾಗದಲ್ಲಿ ನೀಲಿ ಬೀಕಾನ್ ಹೊಂದಿದ್ದ ವಾಹನದ ಪಕ್ಕದಲ್ಲಿ 8-9 ಜನ ನಿಂತಿರುವುದನ್ನು ಗಮನಿಸಿದರು. ಪೊಲೀಸರಿಗೆ ಸೇರಿದ ಬೇರೆ ವಾಹನವೆಂದು ಎಂದು ಅನುಮಾನಿಸಿ ನಿಂತರು.

ಅವರಲ್ಲಿ ಒಬ್ಬಾತ ಡಬಲ್ ಬ್ಯಾರೆಲ್ ಗನ್ ಹೊಂದಿದ್ದ ಮತ್ತು ಅವರಿಗೆ ಕಿರುಕುಳ ನೀಡಲು ಪ್ರಯತ್ನಿಸುತ್ತಿದ್ದ ಎಂದು ವಿಶಾಲ್ ಹೇಳಿದ್ದಾನೆ. ಆರೋಪಿಯೊಬ್ಬ ವಿಶಾಲ್ ನ ಜೇಬಿನಿಂದ 15 ಸಾವಿರ ರೂ. ಕಿತ್ತುಕೊಂಡಿದ್ದಾನೆ.

ಆ ಸ್ಥಳದಿಂದ ಪರಾರಿಯಾಗಲು ಪ್ರಯತ್ನಿಸಿದರೂ ಆರೋಪಿಗಳು ತಮ್ಮ ವಾಹನವನ್ನು ಬೆನ್ನಟ್ಟಿದರು ಮತ್ತು ತನ್ನ ಮೇಲೆ ಗುಂಡು ಹಾರಿಸಿದರು ಎಂದು ವಿಶಾಲ್ ಹೇಳಿದ್ದಾನೆ. "ನಾನು ವಾಹನ ಸವಾರಿ ಮಾಡುತ್ತಿದ್ದೆ, ಆದರೆ ಗೌರಿ ಶಂಕರ್ ಡಾಬಾ ಬಳಿ ಅದು ನಿಂತುಹೋಯಿತು. ಅವರು ನಮ್ಮನ್ನು ಎಲ್ಲ ಕಡೆಯಿಂದ ಸುತ್ತುವರಿದು ವಾಹನದಿಂದ ನಮ್ಮನ್ನು ಹೊರಗೆ ಎಳೆದು ಹೊಡೆದರು, ಡ್ಯಾಶ್‌ಬೋರ್ಡ್‌ ಮೇಲೆ ಬಟ್ಟೆಯ ಕೆಳಗೆ ಇಟ್ಟಿದ್ದ 35,000 ರೂ. ಕಿತ್ತುಕೊಂಡು. ತಮ್ಮ ಮೋಟರ್ ಸೈಕಲ್‌ ಮತ್ತು ಎಸ್‌ಯುವಿ ವಾಹನಗಳಲ್ಲಿ ಆ ಸ್ಥಳದಿಂದ ಪರಾರಿಯಾದರೆಂದು ವಿಶಾಲ್ ಸುದ್ದಿಸಂಸ್ಥೆಯೊಂದಕ್ಕೆ ತಿಳಿಸಿದ್ದಾನೆ.

ಪ್ರಮುಖ ಆರೋಪಿ ಮೋನು ಚಾವ್ಲಾ ನನ್ನು ಬಂಧಿಸಿ ಆತನ ವಾಹನವನ್ನು ವಶಪಡಿಸಿಕೊಂಡಿರುವುದಾಗಿ ಶಹಾಬಾದ್ ಡಿಎಸ್ಪಿ ಆತ್ಮಾ ರಾಮ್ ಪುನಿಯಾ ಹೇಳಿದ್ದಾರೆ. ಶನಿವಾರ, ಮೋನುನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ಕರೆದೊಯ್ಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net