ಉಗ್ರ ಸಂಘಟನೆ ಜೊತೆ ಸಂಪರ್ಕ; ಧರ್ಮಾವರಂನಲ್ಲಿ ಓರ್ವನನ್ನ ಬಂಧಿಸಿದ ಪೊಲೀಸರು| Arrest

Arrest
Published on

Arrest: ಪಾಕಿಸ್ತಾನ ಮೂಲದ ಜೈಶ್-ಎ-ಮೊಹಮ್ಮದ್ ಎಂಬ ಉಗ್ರ ಸಂಘಟನೆ ಜೊತೆ ಸಂಪರ್ಕ ಹಿನ್ನೆಲೆ ಆಂಧ್ರ ಪ್ರದೇಶದ ಸತ್ಯಸಾಯಿ ಜಿಲ್ಲೆಯ ಧರ್ಮಾವರಂನಲ್ಲಿ ಓರ್ವನನ್ನು ಬಂಧಿಸಿದ್ದಾಗಿ ಆಂಧ್ರ ಪೊಲೀಸರು ತಿಳಿಸಿದ್ದಾರೆ ಎಂದು ಶನಿವಾರ(ಆಗಸ್ಟ್ 16) ವರದಿಯಾಗಿದೆ.

ಬಂಧಿತನನ್ನು ನೂರ್ ಮೊಹಮ್ಮದ್ ಶೇಖ್ ಎಂದು ಗುರುತಿಸಲಾಗಿದೆ. ಭಾರತದಲ್ಲಿ ನಿಷೇಧಿಸಲಾದ ಭಯೋತ್ಪಾದಕ ಸಂಘಟನೆಗಳ ವಾಟ್ಸಾಪ್ ಗುಂಪುಗಳ ಸದಸ್ಯನಾಗಿದ್ದು, ಆನ್‌ಲೈನ್ ಕರೆಗಳ ಮೂಲಕ ಜೈಶ್-ಎ-ಮೊಹಮ್ಮದ್ ಮತ್ತು ಪಾಕಿಸ್ತಾನದ ಇತರರೊಂದಿಗೆ ಮಾತನಾಡಿದ್ದಾರೆ. ಮುಸ್ಲಿಂ ಯುವಕರನ್ನು ಭಯೋತ್ಪಾದನೆಯ ಕಡೆಗೆ ಸೆಳೆಯುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಂಧಿತ ಉಗ್ರ ಇನ್ನು ಯಾವುದೇ ಉಗ್ರ ಕೃತ್ಯದಲ್ಲಿ ಭಾಗಿಯಾಗಿಲ್ಲ. ಸಂಘಟನೆಯ ಪ್ರಭಾವಕ್ಕೆ ಒಳಗಾಗಿ ತರಬೇತಿಯನ್ನು ಪಡೆದಿದ್ದಾನೆ. ಮೊಹಮ್ಮದ್ ಭಾರತೀಯ ಪ್ರಜೆಯಾಗಿದ್ದು, ಅವನ ಪೂರ್ವಜರು ಧರ್ಮಾವರಂನವರು. ವಿದೇಶಿ ಸಂಘಟನೆಗಾಗಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ವಿಚಾರಣೆಯಿಂದ ತಿಳಿಯಬೇಕಾಗಿದೆ ಎಂದು ಧರ್ಮಾವರಂ ಉಪವಿಭಾಗ ಪೊಲೀಸ್ ಅಧಿಕಾರಿ ನರಸಿಂಗಪ್ಪ ಹೇಳಿದ್ದಾರೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net