

ಶಿವಮೊಗ್ಗ: ಹರಿಯಾಣದ ಗುರುಗಾಂವ್‌ನ ಅಮೈಟಿ ಇಂಟರ್‌ನ್ಯಾಷನಲ್ ಸ್ಕೂಲ್‌ನಲ್ಲಿ ಇತ್ತೀಚೆಗೆ ನಡೆದ ಸಿಬಿಎಸ್‌ಸಿ ಶಾಲೆಗಳ ರಾಷ್ಟ್ರಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ ಶಿವಮೊಗ್ಗ ಗೋಪಾಳದ ಪೋದಾರ್ ಶಾಲೆ ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.
ಜ.30ರಿಂದ ಫೆ.1ರವರೆಗೆ ನಡೆದ ವಸ್ತುಪ್ರದರ್ಶನದಲ್ಲಿ ರಾಷ್ಟ್ರದ 429 ಶಾಲೆಗಳ ಮಕ್ಕಳು ವಿವಿಧ ಮಾದರಿಗಳೊಂದಿಗೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು.
ಅದರಲ್ಲಿ ಅದ್ವಿತೀಯ ಬ್ಲಾಕ್ ಸೋಲ್ಡರ್ ಫೈ ಶೀರ್ಷಿಕೆಯಡಿ ಶಿಕ್ಷಕಿ ಎಂ.ಎಸ್.ಶ್ವೇತಾ ಮಾರ್ಗದರ್ಶನದಲ್ಲಿ ಸಿದ್ಧಾಂತ ಬಿ. ಪೃಥ್ವಿ ಮತ್ತು ಡಿ.ಆರ್.ಪ್ರಣಿತ್ ರೆಡ್ಡಿ ಜೂನಿಯರ್ ವಿಭಾಗದಲ್ಲಿ ಭಾಗವಹಿಸಿ ವಿಶೇಷ ಸಾಧನೆ ಮಾಡಿದ್ದಾರೆ. ಸಿದ್ಧಾಂತ ಬಿ. ಪೃಥ್ವಿ ಅವರು ಡಾ. ಬಿ.ಸಿ.ಪೃಥ್ವಿ, ಡಾ. ಎಸ್.ರೂಪಾಶ್ರೀ ಅವರ ಪುತ್ರ ಹಾಗೂ ಡಿ.ಆರ್.ಪ್ರಣಿತ್ ರೆಡ್ಡಿ ಅವರು ಡಿ.ಎಸ್.ರಮೇಶ್, ಬಿ.ಕೆ.ಅನುಷಾ ಅವರ ಪುತ್ರ.