

ರಾಣೆಬೆನ್ನೂರ: ಪಾಲಕರು ಮಕ್ಕಳ ಹಲ್ಲಿನ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ದಂತ ವೈದ್ಯ ಡಾ. ಪ್ರಮೋದ ಉದಗನಿ ಹೇಳಿದರು.
ತಾಲೂಕಿನ ಅಸುಂಡಿ ಗ್ರಾಮದ ಡಾ. ಕಡಕೋಳ ಪೋದಾರ್ ರ್ಲನ್ ಸ್ಕೂಲಿನಲ್ಲಿ ಡಾ. ಹಾಲಪ್ಪ ಕಡಕೋಳ ಫೌಂಡೇಶನ್ ವತಿಯಿಂದ ಶನಿವಾರ ಏರ್ಪಡಿಸಿದ್ದ ದಂತ ತಪಾಸಣಾ ಶಿಬಿರದಲ್ಲಿ ಅವರು ಮಾತನಾಡಿದರು.
ಸಿಹಿ ಪದಾರ್ಥಗಳ ಸೇವನೆಯಿಂದ ದಂತ ಕುಳಿಗಳು ಉಂಟಾಗಿ ಮಕ್ಕಳು ತೊಂದರೆ ಅನುಭವಿಸಬೇಕಾಗುತ್ತದೆ. ಅದಕ್ಕಾಗಿ ಮಕ್ಕಳು ನಿತ್ಯವೂ ಎರಡು ಬಾರಿ ಹಲ್ಲನ್ನು ಉಜ್ಜುವಂತೆ ಪಾಲಕರು ನೋಡಿಕೊಳ್ಳಬೇಕು ಎಂದರು.
ಡಾ. ಪವನ ಉದಗನಿ, ಡಾ. ಬಿ.ಎಸ್. ಪಾಟೀಲ, ಡಾ. ಸಂತೋಷ ಸಕ್ರಿ, ಡಾ. ಮಹಾಂತೇಶ ಎಸ್.ಎಸ್., ಡಾ. ಮಲ್ಲಿಕಾರ್ಜುನ ಎಚ್.ಬಿ., ಡಾ. ಪ್ರಸನ್ನಕುಮಾರ ಕಡಕೋಳ ಮಕ್ಕಳ ದಂತ ತಪಾಸಣೆ ಮಾಡಿದರು.
ಆಡಳಿತ ಮಂಡಳಿ ಕಾರ್ಯದಶಿರ್ ಪ್ರಶಾಂತ ಕಡಕೋಳ, ಕವಿತಾ ಕಡಕೋಳ, ಪ್ರಾಚಾರ್ಯ ರೂಪೇಶ ಘಾಟಗೆ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.