ಬೆಂಗಳೂರಲ್ಲಿ ಪ್ರಧಾನಿ ರೋಡ್ ಶೋ; ಮರಗಳಿಗೆ ಕೊಡಲಿ ಏಟು ಕೊಡುತ್ತಿರುವ ಬಿಬಿಎಂಪಿ!

trees
Published on

ಬೆಂಗಳೂರು: ಚುನಾವಣಾ ರಾಜಕೀಯದಲ್ಲಿ ರೋಡ್ ಶೋಗಳೂ ಪ್ರಮುಖ ಪಾತ್ರ ವಹಿಸುತ್ತವೆ. ಜನರನ್ನು ಸೆಳೆಯಲು ನಾನಾ ಕಸರತ್ತು ಮಾಡುವ ಸಾಹಸದಲ್ಲಿ ನಾಯಕರು ಭರ್ಜರಿ ಪ್ರಚಾರ ನಡೆಸುತ್ತಾರೆ. ನಾಳೆ ಬೆಂಗಳೂರಿನಲ್ಲಿ ಪ್ರಧಾನಿ ಮೋದಿಯ ರೋಡ್ ಶೋ ಇದ್ದು ಕೊಡಲಿ ಏಟಿನ ಸದ್ದು ಅಲ್ಲಲ್ಲಿ ಕೇಳಿ ಬರುತ್ತಿದೆ.

ನಾಳೆ ಮೋದಿ ರೋಡ್ ಶೋ ಹಿನ್ನೆಲೆ ಬಸವನಗುಡಿ, ವಿಜಯನಗರ ಭಾಗಗಳಲ್ಲಿ ಮರಗಳಿಗೆ ಕೊಡಲಿ ಪೆಟ್ಟು ಬೀಳುತ್ತಿದೆ. ಮೋದಿ ರೋಡ್ ಶೋಗೆ ತೊಡಕು ಉಂಟಾಗುತ್ತೆ ಎಂದು ಮರಗಳ ಗೆಲ್ಲುಗಳನ್ನು ಕಡಿಯಲಾಗುತ್ತಿದೆ.

ಈ ಕೆಲಸದಲ್ಲಿ ಬಿಬಿಎಂಪಿ ಪೊಲೀಸರ ಸಹಯೋಗದೊಂದಿಗೆ ಗೆಲ್ಲುಗಳನ್ನು ಕಡಿಯುತ್ತಿದೆ. ಇತ್ತ ಕಡೆ, ನ್ಯಾಯಾಲಯದಲ್ಲಿ ರ್ಯಾಲಿಗಳ ಸಮಯದಲ್ಲಿ ಸುರಕ್ಷತೆ, ಹಾಗೂ ಇತರ ಆಯಾಮಗಳ ಬಗ್ಗೆ ನ್ಯಾಯಮೂರ್ತಿಗಳು ಬಿಬಿಎಂಪಿ ಹಾಗೂ ಪೊಲೀಸ್ ಆಯುಕ್ತರಿಂದ ಮಾಹಿತಿ ಪಡೆಯುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net