ಸ್ವಾತಂತ್ರ್ಯೋತ್ಸದ ಭಾಷಣದಲ್ಲಿ ಆರ್​ಎಸ್​ಎಸ್​ ಹೊಗಳಿದ ಪ್ರಧಾನಿ; ಹತಾಶೆ, ಓಲೈಕೆ ಎಂದು ಕಾಂಗ್ರೆಸ್ ಕಿಡಿ| Congress

79th Independence Day celebration at Red Fort
New Delhi: Prime Minister Narendra Modi during the 79th Independence Day celebration at the Red Fort, in New Delhi, Friday, Aug. 15, 2025. (PTI Photo/Ravi Choudhary) (PTI08_15_2025_000310A)
Published on

Congress: 79ನೇ ಸ್ವಾತಂತ್ರ್ಯೋತ್ಸದ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೊಗಳಿದ್ದಕ್ಕೆ, ಕಿಡಿಕಾರಿರುವ ವಿಪಕ್ಷ ಕಾಂಗ್ರೆಸ್ ಇದನ್ನು ಹತಾಶೆ ಮತ್ತು ಕುರ್ಚಿ ಉಳಿಸಿಕೊಳ್ಳಲು ಬಳಸಿರುವ ಓಲೈಕೆಯ ಪ್ರಯತ್ನ ಎಂದು ವಾಗ್ದಾಳಿ ನಡೆಸಿದೆ.

ಈ ಕುರಿತು ಎಕ್ಸ್​ನಲ್ಲಿ ಪೋಸ್ಟ್ ಮಾಡಿರುವ ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್, ಸ್ವಾತಂತ್ರ್ಯೋತ್ಸವದ ದಿನವು ದೂರದೃಷ್ಟಿ, ಸ್ಪಷ್ಟವಾದ ಮಾತು ಹಾಗೂ ಪ್ರೇರಣೆಯ ಕ್ಷಣವಾಗಿರಬೇಕಿತ್ತು. ಆದರೆ ಇಂದಿನ ಪ್ರಧಾನಿಯವರ ಭಾಷಣದಲ್ಲಿ ಸ್ವಪ್ರಶಂಸೆ, ಆಯ್ದ ಕಥೆಗಳ ನೀರಸ ಮಿಶ್ರಣವಾಗಿತ್ತು. ದೇಶದ ಆರ್ಥಿಕತೆಯ ಸಂಕಷ್ಟ, ಏರುಗತಿಯಲ್ಲಿ ಬೆಳೆಯುತ್ತಿರುವ ಆರ್ಥಿಕ ಅಸಮಾನತೆ, ನಿರುದ್ಯೋಗದ ಬಗ್ಗೆ ಯಾವುದೇ ಪ್ರಾಮಾಣಿಕ ಉಲ್ಲೇಖವಿರಲಿಲ್ಲ ಎಂದು ಕಿಡಿಕಾರಿದ್ದಾರೆ.

ಇನ್ನೊಂದು ಪ್ರಧಾನಿಯ ಭಾಷಣದ ಅತ್ಯಂತ ಅಪಾಯಕಾರಿ ಅಂಶವೆಂದರೆ ಕೆಂಪುಕೋಟೆ ಮೇಲೆ ನಿಂತು ಆರ್​ಎಸ್ಎಸ್​ ಹೆಸರು ಪ್ರಸ್ತಾಪಿಸಿದ್ದು, ಇದು ಸಂವಿಧಾನಿಕ, ಜಾತ್ಯಾತೀತ ಗಣರಾಜ್ಯದ ಭಾವನೆಯ ಮುಕ್ತ ಉಲ್ಲಂಘನೆ. ಮುಂದಿನ ತಿಂಗಳು ಮೋದಿಯವರು 75ನೇ ವರ್ಷಕ್ಕೆ ಕಾಲಿಡುತ್ತಿದ್ದಾರೆ. ಅದಕ್ಕೂ ಮೊದಲು ಸಂಘವನ್ನು ಸಂತೋಷಪಡಿಸುವ ಒಂದು ಹತಾಶ ಪ್ರಯತ್ನವಷ್ಟೇ. 2024 ಜೂನ್ 4ರ ಬಳಿಕ ದುರ್ಬಲರಾಗಿರುವ ಪ್ರಧಾನಿ, ಈಗ ಸಂಪೂರ್ಣ ಮೋಹನ್ ಭಾಗವತ್ ಕೃಪೆ ಮೇಲೆ ಅವಲಂಬಿತರಾಗಿದ್ದಾರೆ ಎಂದು ಪ್ರತಿಪಾದಿಸಿದ್ದಾರೆ.

ಸ್ವಾತಂತ್ರ್ಯೋತ್ಸವ ದಿನದಂತಹ ರಾಷ್ಟ್ರೀಯ ಸಂದರ್ಭವನ್ನು ವೈಯಕ್ತಿಕ ರಾಜಕೀಯ ಲಾಭಕ್ಕಾಗಿ ಬಳಸುವುದು ನಮ್ಮ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಅತ್ಯಂತ ಹಾನಿಕಾರಕ.ಇಂದು ಪ್ರಧಾನಯವರು ದಣಿದವರಂತೆ ಕಂಡರು, ಶೀಘ್ರದಲ್ಲೇ ಅವರು ನಿವೃತ್ತರಾಗಲಿದ್ದಾರೆ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?

ತಮ್ಮ 12 ವರ್ಷಗಳ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಎಂದು ಆರ್​ಎಸ್ಎಸ್​ ಹೆಸರು ಬಳಸದ ಪ್ರಧಾನಿ ಮೋದಿ ಇಂದು ಮೊದಲ ಬಾರಿಗೆ ತಮ್ಮ ಭಾಷಣದಲ್ಲಿ ಬಳಿಸಿದ್ದರು. ಆರ್​ಎಸ್​ಎಸ್​ ಒಂದು ವಿಶ್ವದ ಅತಿದೊಡ್ಡ ಸರ್ಕಾರೇತರ ಎನ್​ಜಿಓ ಎಂದು ಕರೆದಿದ್ದರು.

"ಇಂದು ನಾನು ಬಹಳ ಹೆಮ್ಮೆಯಿಂದ ಒಂದು ವಿಷಯವನ್ನು ಉಲ್ಲೇಖಿಸಲು ಬಯಸುತ್ತೇನೆ. 100 ವರ್ಷಗಳ ಹಿಂದೆ ಒಂದು ಸಂಘಟನೆ ಹುಟ್ಟಿಕೊಂಡಿತು. ಅದು ಆರೆಸ್ಸೆಸ್. 100 ವರ್ಷಗಳ ರಾಷ್ಟ್ರೀಯ ಸೇವೆಯು ಭಾರತದ ಇತಿಹಾಸದಲ್ಲಿ ಬಹಳ ಹೆಮ್ಮೆಯ ಮತ್ತು ಅದ್ಭುತವಾದ ಪುಟವಾಗಿದೆ. ಆರ್​ಎಸ್​ಎಸ್ ಕಾರ್ಯಕರ್ತರು ವ್ಯಕ್ತಿತ್ವ ಮತ್ತು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತಮ್ಮ ಜೀವನ ಮುಡಿಪಾಗಿಟ್ಟಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದರು.(ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net