ಕೆನಡಾ ವಿರುದ್ಧ ಮೋದಿ ಗುಡುಗು! ಹೇಡಿತನದ ಪ್ರಯತ್ನಗಳಿಗೆ ಜಗ್ಗಲ್ಲ ಎಂದ ಪ್ರಧಾನಿ | PM NarendraModi

PM NarendraModi
Published on

ನವದೆಹಲಿ: ಕೆನಾಡದ ಒಂಟೋರಿಯಾ ಪ್ರಾಂತ್ಯದದಲ್ಲಿ ಹಿಂದು ದೇವಾಲಯದ ಮೇಲೆ ಇತ್ತೀಚೆಗೆ ನಡೆದ ದಾಳಿಯನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿ(PM NarendraModi) ಸೋಮವಾರ (ನ.04) ಖಂಡಿಸಿದ್ದಾರೆ. ಈ ಹಿಂಸಾಚಾರವು ಕೆನಾಡದ ಭಾರತೀಯ ರಾಜತಾಂತ್ರಿಕವನ್ನು ಬೆದರಿಸುವ 'ಹೇಡಿತನದ ಪ್ರಯತ್ನಗಳು' ಎಂದು ಗುಡುಗಿದ್ದಾರೆ.

ಈ ಕುರಿತು ತಮ್ಮ ಎಕ್ಸ್ (ಈ ಹಿಂದಿನ ಟ್ವಿಟರ್​​)​ ಖಾತೆಯಲ್ಲಿ ಪೋಸ್ಟ್​ ಮಾಡಿರುವ ಪ್ರಧಾನಿ ''ಕೆನಾಡದಲ್ಲಿ ಉದ್ದೇಶಪೂರ್ವಕವಾಗಿ ಹಿಂದು ದೇವಾಲಯದ ಮೇಲೆ ನಡೆದ ದಾಳಿಯನ್ನು ನಾನು ಬಲವಾಗಿ ಖಂಡಿಸುತ್ತೇನೆ. ನಮ್ಮ ರಾಜತಾಂತ್ರಿಕತೆಯನ್ನು ಬೆದರಿಸುವ ಹೇಡಿತನದ ಪ್ರಯತ್ನಗಳು ಅಷ್ಟೇ ಭಯಾನಕವಾಗಿವೆ. ಇಂತಹ ಹಿಂಸಾಚಾರದ ಕೃತ್ಯಗಳು ಭಾರತದ ಸಂಕಲ್ಪವನ್ನು ಎಂದೂ ದುರ್ಬಲಗೊಳಿಸಲಾಗದು. ಕೆನಾಡ ಸರ್ಕಾರ ನ್ಯಾಯವನ್ನು ಎತ್ತಿಹಿಡಿಯುತ್ತದೆ ಎಂದು ನಾವು ನಿರಿಕ್ಷೀಸುತ್ತೇವೆ'' ಎಂದಿದ್ದಾರೆ.

ಇನ್ನು ಈ ಕುರಿತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್​ ಪ್ರತಿಕಾಗೋಷ್ಠಿ ನಡೆಸಿ, "ಭಾರತೀಯ ಪೂಜ್ಯನೀಯ ಎಲ್ಲ ಸ್ಥಳಗಳನ್ನು ದಾಳಿಯಿಂದ ರಕ್ಷಿಸಲಾಗಿವೆಯೇ ಎಂಬುದನ್ನು ಖಚಿತ ಪಡಿಸಿಕೊಳ್ಳಲು ಕೆನಡಾ ಸರ್ಕಾರಕ್ಕೆ ನಾವು ಕರೆ ನೀಡಿದ್ದೇವೆ. ಅಲ್ಲಿನ ಸರ್ಕಾರ ಹಿಂಸಾಚಾರದಲ್ಲಿ ತೊಡಗಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂಬ ನಿರೀಕ್ಷೆಯಲಿದ್ದೇವೆ" ಎಂದು ತಿಳಿಸಿದ್ದಾರೆ.(ಏಜೆನೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net