ನೂತನ ಸಂಸತ್ ಭವನದ ಮುಂದೆ ರಾಷ್ಟ್ರ ಲಾಂಛನ ಅನಾವರಣಗೊಳಿಸಿದ ಪ್ರಧಾನಿ ಮೋದಿ

PM final
Published on

ನವದೆಹಲಿ: ನೂತನ ಸಂಸತ್​ ಭವನದ ಮುಂದೆ ರಾಷ್ಟ್ರ ಲಾಂಛನವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಅನಾವರಣಗೊಳಿಸಿದರು.

ಈ ಬಳಿಕ ಪ್ರಧಾನಿ ಮೋದಿ ಲಾಂಚನ ನಿರ್ಮಾಣದಲ್ಲಿ ತೊಡಗಿದ್ದ ಶ್ರಮಜೀವಿಗಳೊಂದಿಗೆ ಸಂವಾದ ನಡೆಸಿದರು. ಈ ವೇಳೆ ಲೋಕಸಭಾ ಸ್ಪೀಕರ್​ ಓಂ ಬಿರ್ಲಾ, ಕೇಂದ್ರ ಸಚಿವ ಹರ್ದಿಪ್​​ ಸಿಂಗ್​ ಪುರಿ ಭಾಗವಹಿಸಿದ್ದರು.

6.5 ಅಡಿ ಎತ್ತರದ ಕಂಚಿನ ಲಾಂಛನವನ್ನು ನಿರ್ಮಿಸಲು 9 ತಿಂಗಳ ಕಾಲ ಅವಧಿ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಲೋಕೋಪಯೋಗಿ ಇಲಾಖೆ ಮಾಹಿತಿ ನೀಡಿದೆ.

Koo App
सत्यमेव जयते! PM Narendra Modi Ji unveiled the National Emblem cast on the roof of the New Parliament Building.
View attached media content
-Ashwini Vaishnaw (@ashwinivaishnaw)11 July 2022

ಈ ಲಾಂಛನ 9500 ಕೆಜಿ ತೂಕವಿದ್ದು, ಅಗಲ 4.4 ಅಡಿ ಇದೆ. ಅತ್ಯಾಧುನಿಕವಾಗಿ ನಿರ್ಮಾಣವಾಗುತ್ತಿರುವ ನೂತನ ಸಂಸತ್​ ಭವನ ಶೀಘ್ರದಲ್ಲೇ ಉದ್ಘಾಟನೆಯಾಗಲಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ಷಿಪ್ರಗತಿಯಲ್ಲಿ ಸಾಗುತ್ತಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net