VIDEO| ರಾಷ್ಟ್ರೀಯ ಶೌರ್ಯ ಪುರಸ್ಕೃತ ಮಕ್ಕಳ ಜತೆ ಪ್ರಧಾನಿ ಸಂವಾದ: ಭವಿಷ್ಯದ ಬಗ್ಗೆ ಸ್ಪೂರ್ತಿ ತುಂಬಿದ ನರೇಂದ್ರ ಮೋದಿ

PM 2
Published on

ನವದೆಹಲಿ: ಚಿಕ್ಕ ವಯಸ್ಸಿನಲ್ಲೇ ಇಂತಹ ಅದ್ಭುತ ಕೆಲಸ ಮಾಡಿದ್ದೀರಾ ಎಂದರೆ ನನಗೆ ಆಶ್ಚರ್ಯವಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಸಂತಸ ವ್ಯಕ್ತಪಡಿಸಿದ್ದಾರೆ.

2020ನೇ ಸಾಲಿನ ರಾಷ್ಟ್ರೀಯ ಶೌರ್ಯ ಪುರಸ್ಕರ ಮಕ್ಕಳ ಜತೆ ಸಂವಾದ ನಡೆಸಿದ ಪ್ರಧಾನಮಂತ್ರಿ, ಭವಿಷ್ಯದಲ್ಲಿ ಇದು ನಿಮಗೆ ಸ್ಪೂರ್ತಿಯಾಗಲಿ. ಕಷ್ಟ ಕಾಲದಲ್ಲಿ ನೀವು ಧೈರ್ಯ ತೋರಿದ್ದೀರಿ. ಇದೇ ನಿಮಗೆ ಭವಿಷ್ಯದಲ್ಲಿ ಹೋರಾಡುವ ಶಕ್ತಿ ನೀಡುತ್ತದೆ ಎಂದರು.

ಜನವರಿ 26 ರಂದು ನಡೆಯಲಿರುವ ಗಣ ರಾಜ್ಯೋತ್ಸವ ಪರೇಡ್​ನಲ್ಲಿ ಈ ಮಕ್ಕಳು ಭಾಗವಹಿಸಲಿದ್ದಾರೆ. ಅಂದೇ ಮಕ್ಕಳಿಗೆ ಶೌರ್ಯ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net