'ಅತ್ಯಂತ ಸ್ಮರಣೀಯ ಕ್ಷಣಗಳು'… ಜಗೇಶ್ವರ ಧಾಮ, ಪಾರ್ವತಿ ಕುಂಡಕ್ಕೆ ಭೇಟಿ ನೀಡಿದ ಅನುಭವ ಹಂಚಿಕೊಂಡ ಪ್ರಧಾನಿ ಮೋದಿ

modi 2
Published on

ಡೆಹ್ರಾಡೂನ್: ಅಕ್ಟೋಬರ್ 12 ರಂದು ಉತ್ತರಾಖಂಡಕ್ಕೆ ಭೇಟಿ ನೀಡಿದ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ (ಇಂದು) "ಉತ್ತರಾಖಂಡದ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ್ ದೇವಾಲಯಗಳಿಗೆ ಭೇಟಿ ನೀಡಿದ್ದು ವಿಶೇಷವಾಗಿತ್ತು. ಪ್ರಾಕೃತಿಕ ಸೌಂದರ್ಯ ಮತ್ತು ದೈವತ್ವಕ್ಕಾಗಿ ಈ ಪವಿತ್ರ ಸ್ಥಳಗಳಿಗೆ ಭೇಟಿ ನೀಡಬೇಕು'' ಎಂದು ಹೇಳಿದರು.

ಪ್ರಧಾನಮಂತ್ರಿಯವರ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ "ಉತ್ತರಾಖಂಡದಲ್ಲಿ ನೀವು ಯಾವ ಸ್ಥಳವನ್ನು ನೋಡಬೇಕು ಎಂದು ಯಾರಾದರೂ ನನ್ನನ್ನು ಕೇಳಿದರೆ, ನೀವು ರಾಜ್ಯದ ಕುಮಾವೂನ್ ಪ್ರದೇಶದಲ್ಲಿ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ್ ದೇವಾಲಯವನ್ನು ನೋಡಬೇಕು ಎಂದು ನಾನು ಹೇಳುತ್ತೇನೆ. ಪ್ರಕೃತಿ ಸೌಂದರ್ಯ ಮತ್ತು ದೈವತ್ವವು ನಿಮ್ಮನ್ನು ಮಂತ್ರಮುಗ್ಧಗೊಳಿಸುತ್ತದೆ. ಖಂಡಿತವಾಗಿಯೂ, ಉತ್ತರಾಖಂಡದಲ್ಲಿ ಭೇಟಿ ನೀಡಲು ಅನೇಕ ಪ್ರಸಿದ್ಧ ಸ್ಥಳಗಳಿವೆ. ಉತ್ತರಾಖಂಡಕ್ಕೆ ನನ್ನ ಭೇಟಿ ಅತ್ಯಂತ ಸ್ಮರಣೀಯ ಅನುಭವಗಳು...ಇಲ್ಲಿ ಕೇದಾರನಾಥ ಮತ್ತು ಬದರಿನಾಥದಂತಹ ಪವಿತ್ರ ಸ್ಥಳಗಳಿವೆ. ಆದರೆ ಅನೇಕ ವರ್ಷಗಳ ನಂತರ ಪಾರ್ವತಿ ಕುಂಡ್ ಮತ್ತು ಜಾಗೇಶ್ವರ ದೇವಾಲಯಕ್ಕೆ ಭೇಟಿ ಕೊಟ್ಟಿದ್ದು ವಿಶೇಷವಾಗಿತ್ತು'' ಎಂದು ತಿಳಿಸಿದ್ದಾರೆ.

ಅ.12 ರಂದು ಪಿಥೋರಗಢ್ ಪ್ರವಾಸ
ಕಳೆದ ಗುರುವಾರ ಅಂದರೆ ಅಕ್ಟೋಬರ್ 12 ರಂದು ಪ್ರಧಾನಿ ನರೇಂದ್ರ ಮೋದಿ ಉತ್ತರಾಖಂಡ ಪ್ರವಾಸದಲ್ಲಿದ್ದರು ಎಂಬುದು ಗಮನಾರ್ಹ. ಇಲ್ಲಿಗೆ ಮೋದಿಯವರ ಈ ಭೇಟಿ ಬಹಳ ವಿಶೇಷವಾಗಿತ್ತು, ಏಕೆಂದರೆ ಅವರು ಎರಡು ಪ್ರಸಿದ್ಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದರು. ಅದು ಈಗ ವಿಶ್ವ ವೇದಿಕೆಯಲ್ಲಿ ಹೊಸ ಗುರುತನ್ನು ಪಡೆದುಕೊಂಡಿದೆ. ಮೊದಲು ಆದಿ ಕೈಲಾಸ ದರ್ಶನಕ್ಕೆ ಬಂದ ಪ್ರಧಾನಿ ಮೋದಿ ನಂತರ ಅಲ್ಮೋರಾದ ಜಾಗೇಶ್ವರ ಧಾಮಕ್ಕೆ ಬಂದರು.

ಗುರುವಾರ ಮೋದಿ ಅವರು ಹೆಲಿಪ್ಯಾಡ್‌ನಿಂದ ಚೀನಾ ಗಡಿ ಬಳಿಯ ಜಿಯೋಲಿಂಗ್‌ಕಾಂಗ್ ತಲುಪಿದರು. ಅಲ್ಲಿ ಅವರು ಜಿಯೋಲಿಂಗ್‌ಕಾಂಗ್‌ನಲ್ಲಿರುವ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದರು. ದೇವಾಲಯವನ್ನು ಪ್ರದಕ್ಷಿಣೆ ಮಾಡುವಾಗ, ಅವರು ಪಾರ್ವತಿ ಕುಂಡದ ಬಳಿ ಧ್ಯಾನಿಸಿದರು. ಇದಾದ ನಂತರ ಸ್ಥಳೀಯರು ನೀಡಿದ ಬಟ್ಟೆ, ಶಾಲು ಮತ್ತು ಪೇಟ ಧರಿಸಿದರು.

ಗುಡ್ಡಗಾಡು ಪ್ರದೇಶಗಳಲ್ಲಿ ಹಲವು ಯೋಜನೆಗಳನ್ನು ಉದ್ಘಾಟಿಸಿದ ಮೋದಿ ಅವರು ಜಾಗೇಶ್ವರ ಧಾಮದ ಅನೇಕ ನೆನಪುಗಳನ್ನು ತಮ್ಮೊಂದಿಗೆ ಕರೆದೊಯ್ದರು. ಅವರಿಗೆ ಜಾಗೇಶ್ವರ ಧಾಮದ ತಾಮ್ರದ ಪ್ರತಿಮೆಯನ್ನು ಸ್ಮರಣಿಕೆಯಾಗಿ ನೀಡಲಾಯಿತು. ನೀರಿನ ಜಗ್ ಅನ್ನು ಸಹ ಉಡುಗೊರೆಯಾಗಿ ನೀಡಲಾಯಿತು.

ಆದಿ ಕೈಲಾಶ್‌ಗೆ ಅಂತಾರಾಷ್ಟ್ರೀಯ ಮನ್ನಣೆ
ಕಳೆದ ಗುರುವಾರ ಜಿಯೋಲಿಂಗ್‌ಕಾಂಗ್ ತಲುಪಿದ ನಂತರ ಮೋದಿ ಅವರು ಆದಿ ಕೈಲಾಶ್‌ಗೆ ಅಂತಾರಾಷ್ಟ್ರೀಯ ಮನ್ನಣೆ ನೀಡಿದರು. ಅವರ ಭೇಟಿಯ ನಂತರ, ಅಂತರ್ಜಾಲ ಮಾಧ್ಯಮದಲ್ಲಿ ಜನರು ಆದಿ ಕೈಲಾಸವನ್ನು ಭೇಟಿ ಮಾಡಲು ಉತ್ಸುಕರಾಗಿ ತೋರುತ್ತಿರುವ ರೀತಿ, ಮುಂದಿನ ದಿನಗಳಲ್ಲಿ ಆದಿ ಕೈಲಾಸವನ್ನು ತಲುಪುವವರ ಸಂಖ್ಯೆ ಹಲವಾರು ಪಟ್ಟು ಹೆಚ್ಚಾಗುವುದಂತೂ ಖಂಡಿತ ಸುಳ್ಳಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net