ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಶುಕ್ರವಾರ (ಫೆ.14) ದೆಹಲಿಯಲ್ಲಿ ಪೋರ್ಚುಗೀಸ್ ಅಧ್ಯಕ್ಷ ಮಾರ್ಸೆಲೊ ರೆಬೆಲೊ ಡಿ ಸೂಸಾ ಅವರನ್ನು ಭೇಟಿಯಾದರು.
ವ್ಯಾಪಾರ ಮತ್ತು ಹೂಡಿಕೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದೊಂದಿಗೆ ದ್ವಿಪಕ್ಷೀಯ ಸಂಬಂಧವನ್ನು ಬಲಪಡಿಸಿಕೊಳ್ಳುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ಪೋರ್ಚುಗೀಸ್ ಅಧ್ಯಕ್ಷ ರೆಬೆಲೊ ಡಿ ಸೂಸಾ ಭಾರತಕ್ಕೆ ಆಗಮಿಸಿದ್ದಾರೆ. ಎರಡೂ ದೇಶದ ನಾಯಕರು ಕೆಲವು ಒಪ್ಪಂದಗಳಿಗೂ ಸಹಿ ಮಾಡಿದ್ದಾರೆ ಎನ್ನಲಾಗಿದೆ.
ಅದೇನೆ ಇರಲಿ ಈ ಸಂದರ್ಭದಲ್ಲಿ ಪ್ರಧಾನಿ ಮೋದಿ ಹಾಗೂ ರೆಬೆಲೊ ಡಿ ಸೂಸಾ ಅವರು ಶೇಕ್ ಹ್ಯಾಂಡ್ (ಹಸ್ತಲಾಘವ) ಮಾಡಿಕೊಂಡ ರೀತಿ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ವಿಪರೀತ ವೈರಲ್ ಆಗತ್ತಿದ್ದು, ನೆಟ್ಟಿಗರು ವಿಧವಿಧವಾಗಿ ಕಾಮೆಂಟ್ ಮಾಡುತ್ತಿದ್ದಾರೆ.

ಈ ವಿಡಿಯೋ ಶುಕ್ರವಾರ ಸಂಜೆಯಿಂದಲೇ ಇಂಟರ್ನೆಟ್ನಲ್ಲಿ ಹರಿದಾಡುತ್ತಿದೆ. ಖಂಡಿತ ಇದೊಂದು ನಗು ತರಿಸುವ ಶೇಕ್ ಹ್ಯಾಂಡ್ ಎಂದು ನೆಟ್ಟಿಗರು ಹೇಳುತ್ತಿದ್ದಾರೆ.
ಮೋದಿ ಹಾಗೂ ರೆಬೆಲೋ ಅವರು ಕೈ ಹಿಡಿದುಕೊಂಡು ಕೆಲ ಕಾಲ ಹಾಗೇ ಶೇಕ್ ಹ್ಯಾಂಡ್ ಮಾಡುತ್ತಲೇ ಇರುತ್ತಾರೆ. ಎರಡು ಮೂರು ತರ ಕೈಕುಲುಕುವ ದೃಶ್ಯ ನೋಡಿದರೆ ಎಂಥವರಿಗಾದರೂ ಕ್ಷಣಕ್ಕೆ ನಗು ಬರುತ್ತದೆ. ತಮ್ಮಿಬ್ಬರ ಸ್ನೇಹ, ಎರಡೂ ದೇಶಗಳ ನಡುವಿನ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂಬುದನ್ನು ತೋರಿಸಲು ಇಬ್ಬರು ನಾಯಕರು ಹೀಗೆ ಗಟ್ಟಿಯಾಗಿ ಕೈ ಹಿಡಿದುಕೊಂಡು ಹಸ್ತಲಾಘವ ಮಾಡಿದ್ದರೂ ನೆಟ್ಟಿಗರು ಮಾತ್ರ ಅದನ್ನು ವಿಪರೀತ ಟ್ರೋಲ್ ಮಾಡಿದ್ದಾರೆ.
ಪೋರ್ಚುಗೀಸ್ ಅಧ್ಯಕ್ಷರ ಕೈಯನ್ನು ಹ್ಯಾಂಡ್ ಪಂಪ್ ಎಂದು ಪ್ರಧಾನಿ ಮೋದಿಯವರು ತಪ್ಪಾಗಿ ತಿಳಿದುಕೊಂಡು ಹೀಗೆ ಕುಲುಕಿದ್ದಾರೆ ಎಂದು ಕಾಮೆಂಟ್ ಮಾಡಿದ್ದಾರೆ.
ಇದೊಂದು ನ್ಯೂಕ್ಲಿಯರ್ (ಅಣುಬಾಂಬ್) ಮಟ್ಟದ ಶೇಕ್ ಹ್ಯಾಂಡ್, ಅವರೇನು ಶೇಕ್ ಹ್ಯಾಂಡ್ ಮಾಡುತ್ತಿದ್ದಾರೋ, ಮಲ್ಲಯುದ್ಧಕ್ಕೆ ಇಳಿದಿದ್ದಾರೋ, ಇಷ್ಟು ದಿನ ಮೋದಿಯವರು ನಯನಾಜೂಕಿಲ್ಲದಂತೆ ತಬ್ಬಿಕೊಳ್ಳುತ್ತಿದ್ದರು, ಈಗ ಕೆಟ್ಟದಾಗಿ ಹಸ್ತಲಾಘವ ಮಾಡುತ್ತಿದ್ದಾರೆ....ಎಂಬಿತ್ಯಾದಿ ಕಾಮೆಂಟ್ಗಳನ್ನು ಬರೆದಿದ್ದಾರೆ. ಹಾಗೇ ವಿಡಿಯೋ ಕೂಡ ಸಿಕ್ಕಾಪಟೆ ವೈರಲ್ ಆಗುತ್ತಿದೆ.(ಏಜೆನ್ಸೀಸ್)