ಅಮಿತಾಭ್​ಗೆ ಜನ್ಮದಿನ ಶುಭಾಶಯ ಕೋರಿದ ಪ್ರಧಾನಿ ಮೋದಿ; ಹುಟ್ಟುಹಬ್ಬದ ಸಂದೇಶದಲ್ಲಿ ಹೇಳಿದ್ದೇನು?

New Project
Published on

ನವದೆಹಲಿ: ಬಾಲಿವುಡ್​ನ ಹಿರಿಯ ನಟ ಅಮಿತಾಭ್​ ಬಚ್ಚನ್​ಗೆ ಪ್ರಧಾನಿ ನರೇಂದ್ರ ಮೋದಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

ಭಾರತೀಯ ಚಿತ್ರರಂಗ ಕಂಡ ಮೇರು ನಟ ಅಮಿತಾಭ್ ಬಚ್ಚನ್ 80ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಸಂದರ್ಭದಲ್ಲಿ ಟ್ವಿಟ್ಟರ್​ನಲ್ಲಿ ಶುಭಾಶಯ ಕೋರಿರುವ ಮೋದಿ 'ಇವರು ಅನೇಕ ಪೀಳಿಗೆಯವರನ್ನು ತಮ್ಮ ಮನರಂಜನೆಯಿಂದ ಪ್ರಭಾವಿಸಿದ್ದಾರೆ. ಇವರೊಬ್ಬ ವಿಶಿಷ್ಟ ಸಿನೆಮಾ ನಟ. ದೀರ್ಘ ಹಾಗೂ ಆರೋಗ್ಯಕರ ಜೀವನವನ್ನು ನಡೆಸಲಿ' ಎಂದು ಶುಭ ಹಾರೈಸಿದ್ದಾರೆ.

ಅಮಿತಾಭ್ ಮಗಳು ಶ್ವೇತಾ ಕೂಡ ಸಾಮಾಜಿಕ ತಾಣಗಳಲ್ಲಿ ತಮ್ಮ ತಂದೆಗೆ ಭಾವನಾತ್ಮಕ ಶುಭಾಶಯಗಳನ್ನು ಕೋರಿದ್ದಾರೆ. ಬಾಲ್ಯದ ನೆನಪುಗಳನ್ನು ಹಳೆ ಫೋಟೊಗಳ ಮೂಲಕ ಹಂಚಿಕೊಂಡಿದ್ದಾರೆ. ಶ್ವೇತಾ ಮಗಳು ನವ್ಯಾ ಕೂಡ ತನ್ನ ಪ್ರೀತಿಯ ಅಜ್ಜನ ಬಗ್ಗೆ ಸಾಮಾಜಿಕ ತಾಣದಲ್ಲಿ ಬರೆದುಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net