

PM Modi: ಪಾಕಿಸ್ತಾನ ವಿರುದ್ಧದ ‘ಆಪರೇಷನ್ ಸಿಂಧೂರ’ ಬಳಿಕ ಇಡೀ ದೇಶವನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತದ ಶಕ್ತಿ ಮತ್ತು ತಾಳ್ಮೆ ಎರಡನ್ನೂ ಅವರು ನೋಡಿದ್ದಾರೆ. ಆಪರೇಷನ್ ಸಿಂಧೂರವನ್ನು ನಮ್ಮ ಸೈನಿಕರು ಯಶಸ್ವಿಗೊಳಿಸಿದ್ದಾರೆ ಎಂದು ಭಾರತೀಯ ಸೇನೆಯನ್ನು ಶ್ಲಾಘಿಸಿದರು.
“ದೇಶದ ಪ್ರತಿಯೊಬ್ಬ ತಾಯಿ ಮತ್ತು ಸಹೋದರರಿಗೂ ಈ ಪರಾಕ್ರಮ ಸಮರ್ಪಣೆ. ಮತ್ತು ಸೈನಿಕರಿಗೆ ಸೆಲ್ಯೂಟ್ ಹೇಳ್ತೀನಿ. ಪಹಲ್ಗಾಮ್ ನಾಗರಿಕರನ್ನು ಅತ್ಯಂತ ಕ್ರೂರವಾಗಿ ಹತ್ಯೆಗೈಯಲಾಯಿತು. ಇದು ಉಗ್ರವಾದಾದ ಅತ್ಯಂತ ಕ್ರೂರ ಮುಖವಾಗಿತ್ತು. ಈ ವಿಷಯ ನನ್ನಲ್ಲಿ ಭಾರೀ ದುಃಖ ತಂದಿತು” ಎಂದು ಹೇಳಿದರು.
"ಪಾಕಿಸ್ತಾನ ಉಗ್ರ ತಾಣಗಳನ್ನು ಶುದ್ಧಿ ಮಾಡಲೇಬೇಕು. ಅಲ್ಲಿಯವರೆಗೂ ಶಾಂತಿ ಬಗ್ಗೆ ಯಾವುದೇ ಮಾತಿಲ್ಲ. ನೀರು ಮತ್ತು ರಕ್ತ ಒಂದೇ ಹಾದಿಯಲ್ಲಿ ಹರಿಯಲ್ಲ. ಅದು ಸಾದ್ಯವಿಲ್ಲ. ಯುದ್ಧದ ಮೈದಾನದಲ್ಲಿ ಈಗಾಗಲೇ ಪಾಕ್ಗೆ ಮಣ್ಣು ಮುಕ್ಕಿಸಿದ್ದೇವೆ. ಪಾಕಿಸ್ತಾನ ಉಳಿಯಬೇಕು ಎಂದರೆ ಉಗ್ರರಿಗೆ ಆಶ್ರಯ ನೀಡುವುದನ್ನು ಮೊದಲು ನಿಲ್ಲಿಸಬೇಕು" ಎಂದು ಪ್ರಧಾನಿ ಎಚ್ಚರಿಕೆ ರವಾನಿಸಿದರು.
"ಇನ್ನು ಮುಂದೆ ಟೆರರ್ ಅಂಡ್ ಟಾಕ್ ಮತ್ತು ಟೆರರ್ ಅಂಡ್ ಟ್ರೇಸ್ ಒಟ್ಟಿಗೆ ನಡೆಯಲು ಸಾಧ್ಯವಿಲ್ಲ. ನೀರು ಮತ್ತು ರಕ್ತ ಎಂದಿಗೂ ಒಂದೇ ಹಾದಿಯಲ್ಲಿ ಹರಿಯಲು ಸಾಧ್ಯವಿಲ್ಲ. ಇದು ಕೂಡ ಹಾಗೆಯೇ. ಪಾಕ್ ಜೊತೆಗೆ ನಮ್ಮ ಮಾತೇನಿದ್ದರೂ ಕೇವಲ ಉಗ್ರ ನಿಗ್ರಹ ಹೊರತು ಯಾವ ವ್ಯವಹಾರ ಅಥವಾ ಇನ್ಯಾವ ವಿಚಾರಕ್ಕೂ ಆಗಿರುವುದಿಲ್ಲ" ಎಂದು ಮೋದಿ ಸ್ಪಷ್ಟವಾಗಿ ಹೇಳಿದರು.
"ಆಪರೇಷನ್ ಸಿಂಧೂರ ಇಲ್ಲಿಗೆ ಮುಗಿದಿಲ್ಲ. ಸದ್ಯಕ್ಕೆ ನಿಂತಿದೆ ಅಷ್ಟೇ. ಪಾಕ್ ಮತ್ತು ಸರ್ಕಾರ ಉಗ್ರರಿಗೆ ಆಶ್ರಯ ನೀಡುವುದಲ್ಲದೇ ಅವರನ್ನು ಪೋಷಿಸುತ್ತಿದೆ. ಉಗ್ರರಿಗೆ ಬೆಂಬಲ ನೀಡುವುದು ಮುಂದೆ ಪಾಕ್ಗೆ ತಿರುಗುಬಾಣವಾಗಲಿದೆ" ಎಂದು ಹೇಳಿದರು.