ಜನವರಿ 9ಕ್ಕೆ ಪ್ರವಾಸಿ ಭಾರತೀಯ ದಿವಸ ಕಾರ್ಯಕ್ರಮ: ಪ್ರಧಾನಿ ನರೇಂದ್ರ ಮೋದಿಯವರಿಂದ ಉದ್ಘಾಟನೆ

Pravasi Bharathiya Divasa
Published on

ನವದೆಹಲಿ: ಕೋವಿಡ್ ಸೋಂಕಿನ ಕಾರಣಕ್ಕೆ ಪ್ರವಾಸಿ ಭಾರತೀಯ ದಿನಾಚರಣೆ ಈ ಸಲ ವರ್ಚುವಲ್ ಕಾರ್ಯಕ್ರಮವಾಗಿರಲಿದ್ದು, ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಜನವರಿ 9ರಂದು ಇದಕ್ಕೆ ಚಾಲನೆ ನೀಡಲಿದ್ದಾರೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ.

ಇದು 16ನೇ ಪ್ರವಾಸಿ ಭಾರತೀಯ ದಿವಸವಾಗಿದ್ದು, ಇದಕ್ಕೆ ಸಂಬಂಧಿಸಿದ ಅಂತರ್ಜಾಲ ತಾಣವನ್ನು ವಿದೇಶಾಂಗ ರಾಜ್ಯ ಸಚಿವ ವಿ.ಮುರಳೀಧರನ್​ ಇಂದು ಲೋಕಾರ್ಪಣೆ ಮಾಡುತ್ತಿದೆ. ಅನಿವಾಸಿ ಭಾರತೀಯರನ್ನು ಒಂದೇ ವೇದಿಕೆಯಲ್ಲಿ ಸೇರಿಸುವುದು ಮತ್ತು ಅವರನ್ನು ದೇಶದ ವಿಚಾರದಲ್ಲಿ ಪಾಲ್ಗೊಳ್ಳುವಂತೆ ಮಾಡುವುದಕ್ಕೆ ಇದೊಂದು ವೇದಿಕೆಯಾಗಿದ್ದು. ಈ ಶೃಂಗದಲ್ಲಿ ಭಾಗವಹಿಸುವುದಕ್ಕೆ ಆನ್​ಲೈನ್ ನೋಂದಣಿ ಕೂಡ ಆರಂಭವಾಗುತ್ತಿದೆ.

ಈ ಸಲದ ಕಾರ್ಯಕ್ರಮದ ಥೀಮ್​ 'ಆತ್ಮನಿರ್ಭರಕ್ಕಾಗಿ ಕೊಡುಗೆ ನೀಡುವುದು'. ಜನವರಿ 9ರಂದು ಪೂರ್ವಾಹ್ನ ಪ್ರಧಾನಿ ಮೋದಿಯವರು ಕಾರ್ಯಕ್ರಮ ಉದ್ಘಾಟಿಸುತ್ತಾರೆ. ಇದೇ ಸಂದರ್ಭದಲ್ಲಿ ಭಾರತವನ್ನು ಅರಿಯಿರಿ ಎಂಬ ರಸಪ್ರಶ್ನೆಯ ವಿಜೇತರ ಹೆಸರಗಳು ಪ್ರಕಟವಾಗಲಿದೆ. ಎರಡು ಅವಧಿಯಲ್ಲಿ ಆತ್ಮನಿರ್ಭರ ಭಾರತದಲ್ಲಿ ಅನಿವಾಸಿ ಭಾರತೀಯರ ಪಾತ್ರ ಮತ್ತು ಕೋವಿಡ್​ ನಂತರದ ಕಾಲಘಟ್ಟದಲ್ಲಿ ಆರೋಗ್ಯ, ಆರ್ಥಿಕತೆ, ಸಾಮಾಜಿಕ ಮತ್ತು ಅಂತಾರಾಷ್ಟ್ರೀಯ ಸಂಬಂಧಗಳು ಎದುರಿಸುವ ಸವಾಲುಗಳ ಕುರಿತು ಗೋಷ್ಠಿ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ. (ಏಜೆನ್ಸೀಸ್)

ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್​ಗಾಗಿ ನಮ್ಮ ಫೇಸ್​ಬುಕ್​ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net