ಮಂಗಳೂರು
ಕೊಚ್ಚಿನ್ ಮಂಗಳೂರು ಸಿಎನ್‌ಜಿ ಪೈಪ್‌ಲೈನ್ ಜನವರಿ 5 ರಂದು ಪ್ರಧಾನಿ ನರೇಂದ್ರ ಮೋದಿ ಅವರಿಂದ ಲೋಕಾರ್ಪಣೆಗೊಳ್ಳಲಿದೆ.
ಬೆಳಗ್ಗೆ 11ಕ್ಕೆ ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿಯವರು
ಉದ್ಘಾಟಿಸಲಿದ್ದಾರೆ, ಕರ್ನಾಟಕ ಕೇರಳದ ಸಿಎಂಗಳು, ರಾಜ್ಯಪಾಲರು, ಪೆಟ್ರೋಲಿಯಂ ಖಾತೆ ಸಚಿವರು ಪಾಲ್ಗೊಳ್ಳಲಿದ್ದಾರೆ ಎಂದು ಗೈಲ್ ಅಧ್ಯಕ್ಷ ಮನೋಜ್ ವರ್ಚುವಲ್ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಕೊಚ್ಚಿನ್ ಹಾಗೂ ಮಂಗಳೂರು ಮಧ್ಯೆ 450 ಕಿ.ಮೀ ಉದ್ದದ ಪೈಪ್‌ಲೈನ್ ಹಲವು ವರ್ಷಗಳ ವಿಳಂಬದ ಬಳಿಕ ಪೂರ್ಣಗೊಂಡು ಕಳೆದ ನವೆಂಬರ್‌ನಲ್ಲಿ ಸಿಎನ್‌ಜಿ ರವಾನೆ ಪ್ರಾರಂಭವಾಯಿತು. ಪ್ರಸ್ತುತ ಎಂಸಿಎಫ್ ಕಂಪನಿ ಸಿಎನ್‌ಜಿ ಬಳಸಿ ಯೂರಿಯಾ ಉತ್ಪಾದನೆ ಶುರು ಮಾಡಿದೆ.
ಮುಂದಿನ ಕೆಲ ತಿಂಗಳಲ್ಲಿ ಒಎಂಪಿಎಲ್, ಎಂಆರ್‌ಪಿಎಲ್ ಕಂಪನಿಗಳು ಕೂಡಾ ಸಿಎನ್‌ಜಿ ಸಂಪರ್ಕ ಪಡೆದುಕೊಳ್ಳುತ್ತಿವೆ, ಆದರೆ ನಗರ ವ್ಯಾಪ್ತಿಯಲ್ಲಿ ಇನ್ನೂ ಪೈಪ್ ಲೈನ್ ಆಗದ ಕಾರಣ ಮನೆಮನೆಗೆ ಸಂಪರ್ಕ ಆಗಲು ಈ ಆರ್ಥಿಕ ವರ್ಷ ಕೊನೆ ಆಗಬಹುದು ಎಂದು ಮನೋಜ್ ತಿಳಿಸಿದರು.