

ನವದೆಹಲಿ: ದೇಶದ ಮೊದಲ ಉಪಪ್ರಧಾನಿ, ದೇಶವನ್ನು ಒಗ್ಗೂಡಿಸಿದ ಮಹಾನ್ ಶಕ್ತಿ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರ ಸ್ಮೃತಿದಿನ ಇಂದು. ದೇಶಕ್ಕೆ ಭದ್ರ ಬುನಾದಿ ಹಾಕಿಕೊಟ್ಟ ಉಕ್ಕಿನ ಮನುಷ್ಯನನ್ನು ಪ್ರಧಾನಿ ನರೇಂದ್ರ ಮೋದಿ ಸ್ಮರಿಸಿ ಗೌರವಿಸಿದ್ದಾರೆ.
ದೇಶದ ಐಕ್ಯತೆ, ಸಮಗ್ರತೆ ಮತ್ತು ಸಾರ್ವಭೌಮತೆಯನ್ನು ಕಾಪಾಡುವಲ್ಲಿ ಅವರು ಹಾಕಿಕೊಟ್ಟ ದಾರಿ ನಮಗೆ ಸದಾ ಪ್ರೇರಣಾದಾಯಿ. ಇಂಥ ಉಕ್ಕಿನ ಮನುಷ್ಯನ ಪುಣ್ಯತಿಥಿ ಸಂದರ್ಭ ಇದು. ಅವರಿ ಶತ ಶತ ನಮನಗಳು ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮೂಲಕ ಗೌರವ ಸಲ್ಲಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸರ್ದಾರ್ ಪಟೇಲರ ಬಗ್ಗೆ ಅಪಾರ ಅಭಿಮಾನ, ಗೌರವ ಇರುವ ಕಾರಣ ದೇಶದಲ್ಲಿ ಅತಿ ಎತ್ತರದ ಸರ್ದಾರ್ ಪಟೇಲ್ ಪ್ರತಿಮೆ ಸ್ಥಾಪಿಸಿ ಏಕತಾ ಪ್ರತಿಮೆ ಎಂಬ ಹೆಸರನ್ನೂ ಇರಿಸಿದ್ದಾರೆ.
ಸರ್ದಾರ್ ಪಟೇಲ್ ಅವರು ಸ್ವಾತಂತ್ರ್ಯ ಹೋರಾಟಗಾರರಾಗಿದ್ದು, ದೇಶದ ಮೊದಲ ಗೃಹ ಸಚಿವ ಮತ್ತು ಉಪಪ್ರಧಾನಿಯಾಗಿದ್ದವರು. ಅನೇಕ ಸಣ್ಣ ಸಣ್ಣ ರಾಜಾಡಳಿತ ಪ್ರದೇಶಗಳನ್ನು ಭಾರತದ ಕೇಂದ್ರಾಡಳಿತ ವ್ಯವಸ್ಥೆಗೆ ಜೋಡಿಸಿ ಏಕಸೂತ್ರದಲ್ಲಿ ಪೋಣಿಸಿದ ಶಕ್ತಿ ಅವರು. ಬಹುತೇಕ ಮಾತುಕತೆ ಮೂಲಕವೇ ಎಲ್ಲವನ್ನೂ ನೆರವೇರಿಸಿದ್ದು, ಅಗತ್ಯ ಇರುವಲ್ಲಿ ಮಾತ್ರವೇ ಸೇನೆಯನ್ನು ಬಳಸಿದ್ದು ವಿಶೇಷ. ಸರ್ದಾರ್ ಪಟೇಲ್ ಪುಣ್ಯತಿಥಿ ನಿಮಿತ್ತ ನಾಡಿನಾದ್ಯಂತ ಅವರಿಗೆ ಗೌರವ ಸಲ್ಲಿಸಿದ್ದಾರೆ. (ಏಜೆನ್ಸೀಸ್)
ಕ್ಷಣ ಕ್ಷಣದ ಸುದ್ದಿಗಳ ಅಪ್ಡೇಟ್ಸ್ಗಾಗಿ ನಮ್ಮ ಫೇಸ್ಬುಕ್ ಪುಟ ಲೈಕ್ ಮಾಡಿ ಮತ್ತು ಫಾಲೋ ಮಾಡಿ..