ದೇಶದ ಮೂರು ಹೈಟೆಕ್​ ಕೊವಿಡ್​-19 ಟೆಸ್ಟ್​ ಲ್ಯಾಬ್​ಗಳನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

Modi 27 Jul 20
Published on

ನವದೆಹಲಿ: ದೇಶದ ಮೂರು ಹೈಟೆಕ್​ ಕೊವಿಡ್​-19 ಟೆಸ್ಟ್ ಲ್ಯಾಬ್​​ಗಳನ್ನು ಇಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ವರ್ಚ್ಯುವಲ್​ ಆಗಿ ಉದ್ಘಾಟನೆ ಮಾಡಿದರು.

ನೊಯ್ಡಾ, ಮುಂಬೈ ಮತ್ತು ಕೋಲ್ಕತ್ತ ಗಳಲ್ಲಿನ ಹೈಟೆಕ್​ ಲ್ಯಾಬ್​ಗಳ ಉದ್ಘಾಟನಾ ಸಮಾರಂಭದಲ್ಲಿ ಆರೋಗ್ಯ ಸಚಿವ ಡಾ. ಹರ್ಷ ವರ್ಧನ್​, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮತ್ತು ಉತ್ತರ ಪ್ರದೇಶಗಳ ಮುಖ್ಯಮಂತ್ರಿಗಳೂ ವಿಡಿಯೋ ಕಾನ್ಫರೆನ್ಸ್​ ಮೂಲಕ ಹಾಜರಿದ್ದರು.

ನೊಯ್ಡಾದ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ಕ್ಯಾನ್ಸರ್​ ಪ್ರಿವೆನ್ಷನ್​ ಆ್ಯಂಡ್​ ರಿಸರ್ಚ್​, ಮುಂಬೈನ್ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ರಿಸರ್ಚ್​ ಇನ್​ ರಿಪ್ರೊಡಕ್ಟಿವ್​ ಹೆಲ್ತ್​ ಮತ್ತು ಕೋಲ್ಕತ್ತರ ನ್ಯಾಷನಲ್​ ಇನ್ಸ್ಟಿಟ್ಯೂಟ್​ ಆಫ್​ ಕಾಲರಾ ಮತ್ತು ಎಂಟರಿಕ್ ಡಿಸೀಸಸ್​ ಸಂಸ್ಥೆಗಳಲ್ಲಿ ಕೊವಿಡ್​-19 ಟೆಸ್ಟ್​ ಹೈಟೆಕ್​ ಲ್ಯಾಬ್​ಗಳನ್ನು ಪ್ರಾರಂಭಿಸಲಾಗಿದೆ.

ಲ್ಯಾಬ್​​ಗಳನ್ನು ಉದ್ಘಾಟಿಸಿದ ಬಳಿಕ ಮಾತನಾಡಿದ ಮೋದಿಯವರು, ಕರೊನಾ ವಿರುದ್ಧದ ಸುದೀರ್ಘ ಮತ್ತು ಬಹುದೊಡ್ಡ ಹೋರಾಟದಲ್ಲಿ ಬಹುಮುಖ್ಯ ಭಾಗವೆಂದರೆ, ನಿರ್ಧಿಷ್ಟ ಆರೋಗ್ಯ ಮೂಲಕಸೌಕರ್ಯಗಳನ್ನು ತ್ವರಿತಗತಿಯಲ್ಲಿ ದೇಶದಲ್ಲಿ ನಿರ್ಮಾಣ ಮಾಡುವುದು. ಇದೇ ಕಾರಣಕ್ಕೆ ಕೇಂದ್ರ ಸರ್ಕಾರ ಆರಂಭದಲ್ಲಿಯೇ 15,000 ಕೋಟಿ ರೂಪಾಯಿಯ ಪ್ಯಾಕೇಜ್​ ಘೋಷಣೆ ಮಾಡಿದೆ ಎಂದು ಹೇಳಿದರು.

ಕರೊನಾ ವಿರುದ್ಧ ಕೇಂದ್ರ ಸರ್ಕಾರ ಈಗಾಗಲೇ ಮೂರು ಟಿಗಳ ಪ್ರಯೋಗ ಮಾಡುತ್ತಿದೆ. ಟೆಸ್ಟ್​-ಟ್ರ್ಯಾಕ್​-ಟ್ರೀಟ್​ ಎಂಬ ಕಾರ್ಯತಂತ್ರವನ್ನು ಅಳವಡಿಸಿಕೊಂಡಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net