

ಗುಜರಾತ್ನ ಅಹಮದಾಬಾದ್ನ ಸಬರಮತಿ ನದಿಯ ಮುಂಭಾಗದಲ್ಲಿರುವ ಎಲ್ಲಿಸ್ ಸೇತುವೆ ಮತ್ತು ಸರ್ದಾರ್ ಸೇತುವೆಗೆ ಸಂಪರ್ಕ ಕಲ್ಪಿಸಲು ನಿರ್ವಿುಸಲಾಗಿರುವ ಅತ್ಯಾಧುನಿಕ ಪಾದಚಾರಿ ಸೇತುವೆಯನ್ನು (ಅಟಲ್ ಬ್ರಿಜ್) ಪ್ರಧಾನಿ ನರೇಂದ್ರಮೋದಿ ಶನಿವಾರ ಉದ್ಘಾಟಿಸಿದರು.
ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ವಿನೂತನ ಮಾದರಿಯಲ್ಲಿ ನಿರ್ವಿುಸಿರುವ ಈ ಸೇತುವೆಯು 300 ಮೀಟರ್ ಉದ್ದವಿದೆ. ಸಬರಮತಿ ನದಿಯ ಪಶ್ಚಿಮ ದಂಡೆಯ ಫ್ಲವರ್ ಪಾರ್ಕ್ ಮತ್ತು ಈವೆಂಟ್ ಗ್ರೌಂಡ್ ನಡುವಿನ ಪ್ಲಾಜಾದಿಂದ ಪೂರ್ವ ದಂಡೆಯಲ್ಲಿರುವ ಕಲೆ ಮತ್ತು ಸಾಂಸ್ಕೃತಿಕ ಪ್ರದರ್ಶನ ಕೇಂದ್ರಕ್ಕೆ ಇದು ಸಂಪರ್ಕ ಸೇತುವಾಗಿದೆ. ಜತೆಗೆ ಈ ಸೇತುವೆ ಕೂಡ ಪ್ರವಾಸೋದ್ಯಮದ ಆಕರ್ಷಣೆ ಆಗಿದೆ.
* 2,600 ಟನ್ ಕಬ್ಬಿಣದ ಪೈಪ್ ಬಳಕೆ 74 ಕೋಟಿ ರೂಪಾಯಿ ವೆಚ್ಚ
* 300 ಮೀ. ಉದ್ದ
* 14 ಮೀ. ಅಗಲ
* 2018ರಲ್ಲಿ ನಿರ್ಮಾಣ ಆರಂಭ, 2022ಕ್ಕೆ ಪೂರ್ಣ