ಈಶಾನ್ಯ ರಾಜ್ಯಗಳಲ್ಲಿ ಅಭಿವೃದ್ಧಿ ಪರ್ವ: ಸಾವಿರಾರು ಕೋಟಿ ರೂ. ಅಭಿವೃದ್ಧಿ ಕಾಮಗಾರಿಗೆ ಚಾಲನೆ

modi
Published on

ಅಗರ್ತಲಾ/ಇಂಫಾಲ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಈಶಾನ್ಯ ರಾಜ್ಯಗಳಲ್ಲಿ ಪ್ರವಾಸ ನಡೆಸಿದ್ದು, ಮಂಗಳವಾರ ಸಾವಿರಾರು ಕೋಟಿ ರೂಪಾಯಿಯ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದರು.

ಚುನಾವಣೆ ಎದುರಾಗಲಿರುವ ಮಣಿಪುರದಲ್ಲಿ ಪ್ರಧಾನಿ ಮೋದಿ 22 ಕಾಮಗಾರಿಗಳಿಗೆ ಚಾಲನೆ ನೀಡಿದರು. ಈ ಪೈಕಿ 1,850 ಕೋಟಿ ರೂಪಾಯಿ ವೆಚ್ಚದ 13 ಯೋಜನೆಗಳನ್ನು ಉದ್ಘಾಟಿಸಿದರು. 2,950 ಕೋಟಿ ರೂಪಾಯಿ ವೆಚ್ಚದ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಮಣಿಪುರದಲ್ಲಿ 1,700 ಕೋಟಿ ರೂಪಾಯಿಗೂ ಅಧಿಕ ವೆಚ್ಚದ ಐದು ರಾಷ್ಟ್ರೀಯ ಹೆದ್ದಾರಿ ಯೋಜನೆಗಳ ಕಾಮಗಾರಿಗೆ ಚಾಲನೆ ನೀಡಲಾಗಿದೆ. 110 ಕಿ.ಮೀ. ಉದ್ದೆ ಹೆದ್ದಾರಿ ನಿರ್ಮಾಣ ಇವುಗಳ ಮೂಲಕ ನಡೆಯಲಿದೆ. ರಾಷ್ಟ್ರೀಯ ಹೆದ್ದಾರಿ 37ರಲ್ಲಿ ಬರಾಕ್ ನದಿಯ ಮೇಲೆ 75 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ವಿುಸಲಾದ ಉಕ್ಕಿನ ಸೇತುವೆಯನ್ನು ಇದೇ ವೇಳೆ ಉದ್ಘಾಟಿಸಲಾಗಿದೆ. 1,100 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪಿಸಿದ 2,387 ಮೊಬೈಲ್ ಟವರ್​ಗಳ ಲೋಕಾರ್ಪಣೆಯೂ ನಡೆಯಿತು.

ತ್ರಿಪುರಾದಲ್ಲಿ ಹಲವು ಯೋಜನೆ

ಮಹಾರಾಜ ಬಿರ್ ಬಿಕ್ರಮ್ ವಿಮಾನ ನಿಲ್ದಾಣದ ಇಂಟೆಗ್ರೇಟೆಡ್ ಟರ್ವಿುನಲ್ ಬಿಲ್ಡಿಂಗ್ ಅನ್ನು ಪ್ರಧಾನಿ ಮೋದಿ ಲೋಕಾರ್ಪಣೆ ಮಾಡಿದರು. 450 ಕೋಟಿ ರೂಪಾಯಿ ವೆಚ್ಚದಲ್ಲಿ ಇದನ್ನು ನಿರ್ವಿುಸಲಾಗಿದೆ. ಮುಖ್ಯಮಂತ್ರಿ ತ್ರಿಪುರಾ ಗ್ರಾಮ ಸಮೃದ್ಧಿ ಯೋಜನೆ, 500 ಕೋಟಿ ರೂಪಾಯಿ ವೆಚ್ಚದ ವಿದ್ಯಾಜ್ಯೋತಿ ಸ್ಕೂಲ್​ಗಳ ಪ್ರಾಜೆಕ್ಟ್ ಮಿಷನ್ 100 ಮುಂತಾದ ಪ್ರಮುಖ ಉಪಕ್ರಮಗಳಿಗೂ ಚಾಲನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net