

ನವದಹೆಲಿ: ಇದೇ ತಿಂಗಳಿನಲ್ಲಿ ಜನ್ಮದಿನವನ್ನು ಆಚರಿಸಿಕೊಳ್ಳಲಿರುವ ಪ್ರಧಾನಿ ನರೇಂದ್ರ ಮೋದಿಯವರ ಸಂಭ್ರಮವನ್ನು ಮತ್ತಷ್ಟು ಹೆಚ್ಚಿಸುವಂಥ ಸುದ್ದಿಯೊಂದು ಹೊರಬಿದ್ದಿದೆ. ಅದೇನೆಂದರೆ, ಜಾಗತಿಕ ನಾಯಕ ಮಾನ್ಯತೆಯ ಶ್ರೇಯಾಂಕಲ್ಲಿ ಇದೀಗ ನಂಬರ್ ಒನ್ ಎನಿಸಿಕೊಂಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೊ ಬೈಡೆನ್ ಮಾತ್ರವಲ್ಲದೆ ಬೋರಿಸ್ ಜಾನ್ಸನ್, ಆ್ಯಂಜೆಲಾ ಮರ್ಕೆಲ್, ಜಸ್ಟಿನ್ ಟ್ರುಡ್ಯೂ ಮುಂತಾದವರನ್ನೂ ಮೀರಿಸಿ ಮೋದಿ ಮುಂಚೂಣಿಗೆ ತಲುಪಿದ್ದಾರೆ. ಅಮೆರಿಕದ ಡೇಟಾ ಇಂಟೆಲಿಜೆನ್ಸ್ ಸಂಸ್ಥೆ ದ ಮಾರ್ನಿಂಗ್ ಕನ್ಸಲ್ಟ್ ನಡೆಸಿರುವ ಸರ್ವೇಯಲ್ಲಿ ಮೋದಿ ಟಾಪ್- 1 ಸ್ಥಾನ ಅಲಂಕರಿಸಿದ್ದಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಈ ಸರ್ವೇ ನಡೆಸಲಾಗಿದ್ದು, ಆಯಾ ದೇಶಗಳಲ್ಲಿನ ವಯಸ್ಕರಿಂದ ಸುಮಾರು ಏಳು ದಿನಗಳ ಕಾಲ ಸಂಗ್ರಹಿಸಿದ ಅಂಕಿ-ಅಂಶಗಳಿಂದ ಈ ಸಮೀಕ್ಷೆ ನಡೆಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ. ಇದರಲ್ಲಿ ಪ್ರಧಾನಿ ಮೋದಿ ಶೇ. 70 ರೇಟಿಂಗ್ನಿಂದ ಮೊದಲ ಸ್ಥಾನದಲ್ಲಿದ್ದರೆ, ಮೆಕ್ಸಿಕೊ ಅಧ್ಯಕ್ಷ ಆ್ಯಂಡ್ರೆಸ್ ಮಾನುವೆಲ್ ಲೊಪೆಜ್ ಒಬ್ರಡಾರ್ ಶೇ. 64 ರೇಟಿಂಗ್ನಿಂದ ಎರಡನೇ ಸ್ಥಾನದಲ್ಲಿದ್ದಾರೆ. ಇಟಲಿಯ ಪ್ರಧಾನಿ ಮರಿಯೊ ಡ್ರಾಘಿ ಮೂರನೇ (ಶೇ. 63) ಸ್ಥಾನದಲ್ಲಿದ್ದಾರೆ. (ಏಜೆನ್ಸೀಸ್)