

ನವದೆಹಲಿ: ಸಾಮಾಜಿಕ ಮಾಧ್ಯಮದ ಖಾತೆಗಳಿಂದ ‘ಮೋದಿ ಕಾ ಪರಿವಾರ್’ (ಮೋದಿಯ ಕುಟುಂಬಸ್ಥರು) ಅನ್ನು ತೆಗೆದುಹಾಕುವಂತೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಬಲಿಗರಲ್ಲಿ ಮನವಿ ಮಾಡಿದ್ದಾರೆ.
ನಮ್ಮ ಉದ್ದೇಶಿತ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಿ ಆಗಿದೆ. ಹಾಗಾಗಿ ಈಗ ಮೋದಿ ಕಾ ಪರಿವಾರ್ ಅನ್ನು ತೆಗೆಯಬಹುದು ಎಂದು ಮೋದಿ ಹೇಳಿದ್ದಾರೆ.
ಮಾರ್ಚ್‌ನಲ್ಲಿ ಆರ್ ಜೆಡಿ ನಾಯಕ ಲಾಲು ಪ್ರಸಾದ್ ಯಾದವ್ ಅವರು ಪ್ರಧಾನಿ ಮೋದಿ ಅವರಿಗೆ ಪ್ರಧಾನಿ ಮೋದಿಗೆ ಕುಟುಂಬ ಇಲ್ಲ. ಅವರಿಗೆ ಕುಟುಂಬ ಏಕಿಲ್ಲ ಎಂದು ಮೊದಲ ಹೇಳಲಿ ಎಂದು ಟೀಕಿಸಿದ್ದರು. ಇದಕ್ಕೆ ತಿರುಗೇಟು ನೀಡಿದ್ದ ಮೋದಿ ಇಡೀ ದೇಶವೇ ನನ್ನ ಕುಟುಂಬ ಎಂದು ತಿರುಗೇಟು ಹೇಳಿದ್ದರು.
ಭಾರತದ ಜನರು ಸತತ ಮೂರನೇ ಬಾರಿಗೆ ಎನ್‌ಡಿಎಗೆ ಬಹುಮತವನ್ನು ನೀಡಿದ್ದಾರೆ. ಇದು ಒಂದು ರೀತಿಯ ದಾಖಲೆಯಾಗಿದೆ. ನಮ್ಮ ರಾಷ್ಟ್ರದ ಸುಧಾರಣೆಗಾಗಿ ಕೆಲಸ ಮಾಡಲು ನಮಗೆ ಜನಾದೇಶವನ್ನು ನೀಡಿದೆ ಎಂದು ಮೋದಿ ಹೇಳಿದ್ದಾರೆ.
ನಾವೆಲ್ಲರೂ ಒಂದೇ ಕುಟುಂಬ ಎಂಬ ಸಂದೇಶವನ್ನು ಪರಿಣಾಮಕಾರಿಯಾಗಿ ರವಾನಿಸಲಾಗಿದೆ. ನಾನು ಮತ್ತೊಮ್ಮೆ ಭಾರತದ ಜನರಿಗೆ ಧನ್ಯವಾದ ಹೇಳುತ್ತೇನೆ ಮತ್ತು ಈಗ ನಿಮ್ಮ ಸಾಮಾಜಿಕ ಮಾಧ್ಯಮದಲ್ಲಿ 'ಮೋದಿ ಕಾ ಪರಿವಾರ್' ಅನ್ನು ತೆಗೆದುಹಾಕುವಂತೆ ವಿನಂತಿಸುತ್ತೇನೆ. ನಮ್ಮ ಉದ್ದೇಶಿತ ಸಂದೇಶವನ್ನು ಪರಿಣಾಮಕಾರಿಯಾಗಿ ತಲುಪಿಸಿ ಆಗಿದೆ. ಹಾಗಾಗಿ ಈಗ ಮೋದಿ ಕಾ ಪರಿವಾರ್ ಅನ್ನು ತೆಗೆಯಬಹುದು ಎಂದು ಮೋದಿ ಹೇಳಿದ್ದಾರೆ.
ವಿಪಕ್ಷಗಳ ಟೀಕೆ ವಿರುದ್ಧ ಬಿಜೆಪಿ ಅಭಿಯಾನ ನಡೆಸಿತ್ತು: ಈ ಹೇಳಿಕೆಗೆ ಬಿಜೆಪಿ ಭರ್ಜರಿ ಕೌಂಟರ್ ನೀಡಿತ್ತು. ಅಮಿತ್ ಶಾ, ಪಕ್ಷದ ಅಧ್ಯಕ್ಷ ಜೆಪಿ ನಡ್ದಾ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹೆಸರಿನ ಪಕ್ಕ ಮೋದಿ ಕಾ ಪರಿವಾರ್ (ಮೋದಿ ಕುಟುಂಬದವರು) ಎಂದು ಬರೆದುಕೊಂಡಿದ್ದರು. ಆ ಮೂಲಕ ವಿಪಕ್ಷಗಳ ಟೀಕೆ ವಿರುದ್ಧ ಅಭಿಯಾನ ನಡೆಸಿದ್ದರು.
ಈಗ ಪ್ರಧಾನಿ ನರೇಂದ್ರ ಮೋದಿ ಅವರು ಸತತ 3ನೇ ಬಾರಿಗೆ ದೇಶದ ಪ್ರಧಾನಿ ಆಗಿದ್ದಾರೆ. ಅಭಿಯಾನದ ಉದ್ದೇಶ ಈಡೇರಿದೆ. ಹಾಗಾಗಿ ಅಭಿಯಾನವನ್ನು ನಿಲ್ಲಿಸಿ ಎಂದು ಅವರು ಕರೆ ನೀಡಿದ್ದಾರೆ.