4 ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಪ್ರಧಾನಿ ಚಾಲನೆ: ಇದು ಅಭಿವೃದ್ಧಿಯ ಹಬ್ಬ ಎಂದು ಬಣ್ಣಿಸಿದ Modi

Bbau - 2025-11-08T104641.398 (1)
Published on

ಉತ್ತರಪ್ರದೇಶ: ತಮ್ಮ ಸಂಸದೀಯ ಕ್ಷೇತ್ರ ವಾರಣಾಸಿಯಲ್ಲಿ ಭೇಟಿ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ(Modi) ಅವರು ನಾಲ್ಕು ಹೊಸ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳಿಗೆ ಶನಿವಾರ(ನ.08) ಚಾಲನೆ ನೀಡಿದರು.

ಉದ್ಘಾಟನೆಯ ನಂತರ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಈ ಕಾರ್ಯಕ್ರಮವನ್ನು ಅಭಿವೃದ್ಧಿಯ ಹಬ್ಬ ಎಂದು ಬಣ್ಣಿಸಿದರು. ಇಲ್ಲಿ ನಡೆಯುವ ಭವ್ಯವಾದ ದೇವ ದೀಪಾವಳಿಯನ್ನು ನಾನು ನೋಡಿದೆ ಮತ್ತು ಇಂದು, ಈ ಅಭಿವೃದ್ಧಿಯ ಹಬ್ಬಕ್ಕಾಗಿ ನಿಮ್ಮೆಲ್ಲರನ್ನು ಅಭಿನಂದಿಸುತ್ತೇನೆ. ಆರ್ಥಿಕ ಅಭಿವೃದ್ಧಿ, ಮೂಲಸೌಕರ್ಯಗಳನ್ನು ಕಂಡ ದೇಶಗಳು ಅಲ್ಲಿ ದೊಡ್ಡ ಪಾತ್ರವನ್ನು ವಹಿಸಿವೆ" ಇದು ಭಾರತದ ಸೆಮಿ-ಹೈಸ್ಪೀಡ್ ರೈಲುಗಳ ವಿಸ್ತರಿಸುತ್ತಿರುವ ಜಾಲದಲ್ಲಿ ಮತ್ತೊಂದು ಮೈಲಿಗಲ್ಲು ಎಂದರು.

ನಗರಗಳು ಮತ್ತು ಪ್ರದೇಶಗಳು ಸುಧಾರಿತ ಸಂಪರ್ಕವನ್ನು ಪಡೆದ ನಂತರ ಅವುಗಳ ಬೆಳವಣಿಗೆ ಸ್ವಾಭಾವಿಕವಾಗಿಯೇ ವೇಗಗೊಳ್ಳುತ್ತದೆ. ನಮ್ಮ ಯಾತ್ರಾ ಸ್ಥಳಗಳು ನಂಬಿಕೆ ಮತ್ತು ಶಕ್ತಿಯ ಕೇಂದ್ರಗಳಾಗಿವೆ. ಈ ರೈಲುಗಳು ಪಾರಂಪರಿಕ ನಗರಗಳನ್ನು ಸಂಪರ್ಕಿಸುವುದಲ್ಲದೆ ಅಭಿವೃದ್ಧಿಯನ್ನು ವೇಗಗೊಳಿಸುತ್ತವೆ. ಕಳೆದ 11 ವರ್ಷಗಳಲ್ಲಿ, ಉತ್ತರ ಪ್ರದೇಶದಲ್ಲಿನ ಅಭಿವೃದ್ಧಿ ಕಾರ್ಯಗಳು ಆರ್ಥಿಕತೆಯನ್ನು ಬಲಪಡಿಸಿವೆ. ಕಳೆದ ವರ್ಷ, 11 ಕೋಟಿ ಭಕ್ತರು ಬಾಬಾ ವಿಶ್ವನಾಥರನ್ನು ಭೇಟಿ ಮಾಡಿದರು ಮತ್ತು 6 ಕೋಟಿಗೂ ಹೆಚ್ಚು ಭಕ್ತರು ರಾಮಲಲ್ಲಾ ದರ್ಶನ ಪಡೆದರು - ಅವರ ಭೇಟಿಗಳು ರಾಜ್ಯದ ಆರ್ಥಿಕತೆಗೆ ಸಾವಿರಾರು ಕೋಟಿ ಕೊಡುಗೆ ನೀಡಿವೆ" ಎಂದು ಅವರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net