ಸೆಲ್ಫಿ ತೆಗೆಯಲು ಹೋಗಿ 262 ಅಡಿ ಆಳದ ಕಂದಕಕ್ಕೆ ಬಿದ್ದು 23 ವರ್ಷದ ಯವತಿ ಸಾವು

Plunges 260ft To Her Death While Taking A Selfie At German Sleeping Beauty Castle
Published on

ಜರ್ಮನಿ :  ಸುಂದರವಾದ ಸ್ಥಳಗಳಿಗೆ ಹೋಗುವುದು ಮತ್ತು ಅಮೂಲ್ಯ ಕ್ಷಣಗಳನ್ನು ಮತ್ತು ಸುಂದರ ಕ್ಷಣಗಳನ್ನು ಸೆರೆಹಿಡಿಯಲು ಸೆಲ್ಫಿ ತೆಗೆದುಕೊಳ್ಳುತ್ತದೆ. ಕೆಲವರು ಸೆಲ್ಫಿ ಹುಚ್ಚಿನಿಂದ ತಮ್ಮ ಪ್ರಾಣವನ್ನೇ ಪಣಕ್ಕಿಡುತ್ತಿದ್ದಾರೆ.  ಹೀಗೆ ಒಬ್ಬಳು  ಯುವತಿ ಅಪಾಯಕಾರಿ ಸಹಾಸಕ್ಕೆ ಕೈ ಹಾಕಿ ಪ್ರಾಣವನ್ನೆ ಬಿಟ್ಟಿದ್ದಾಳೆ.

ಯುವತಿ ಆಕಾಶ ಮುಟ್ಟುವ ಎತ್ತರದ ಬೆಟ್ಟದ ತುದಿಯಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋಗಿದ್ದಳು. ಅಲ್ಲಿ 262 ಅಡಿ ಆಳದ ಗುಂಡಿಗೆ ಬಿದ್ದು ಪ್ರಾಣ ಕಳೆದುಕೊಂಡಿದ್ದಾಳೆ. ಈ ಸುದ್ದಿ ಈಗ ವೈರಲ್ ಆಗುತ್ತಿದೆ.

ಜೆಕೊಸ್ಲೊವಾಕಿಯಾದ 23 ವರ್ಷದ ಸ್ಟಾರ್ ಜಿಮ್ನಾಸ್ಟ್ ನಟಾಲಿ ಸ್ಟಿಚೋವಾ ಸೆಲ್ಫಿ ಕ್ರೇಜ್‌ನಿಂದ ಪ್ರಾಣ ಕಳೆದುಕೊಂಡಿದ್ದಾರೆ. ಜರ್ಮನಿಯ ಟೆಗೆಲ್‌ಬರ್ಗ್‌ನ ನ್ಯೂಶ್ವಾನ್‌ಸ್ಟೈನ್ ಕ್ಯಾಸಲ್ ಬಳಿ ಸೆಲ್ಫಿ ತೆಗೆದುಕೊಳ್ಳುತ್ತಿದ್ದ ಆಕೆ 262 ಅಡಿ ಆಳದ ಕಂದರಕ್ಕೆ ಜಾರಿ ಬಿದ್ದಿದ್ದಾಳೆ.

ಜಿಮ್ನಾಸ್ಟ್ ನಟಾಲಿ ಸ್ಟಿಚೋವಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಮೆದುಳಿಗೆ ತೀವ್ರವಾದ ಗಾಯದಿಂದಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.  ಈ ದುರಂತ ಘಟನೆಗೆ ಪ್ರತಿಕ್ರಿಯಿಸಿರುವ ನೆಟಿಜನ್‌ಗಳು ಜಿಮ್ನಾಸ್ಟ್ ನಟಾಲಿ ಸ್ಟಿಚೋವಾ ಸಾವಿನ ಬಗ್ಗೆ ತಮ್ಮ ದುಃಖವನ್ನು ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net