ಕೃಷ್ಣ ಜನ್ಮಭೂಮಿ: ಮಸೀದಿ ತೆರವು ಅರ್ಜಿ ಸ್ವೀಕರಿಸಿದ ಕೋರ್ಟ್​

Untitled-1
Published on

ಮಥುರಾ: ರಾಮ ಜನ್ಮಭೂಮಿ ವಿವಾದ ಇತ್ಯರ್ಥಗೊಂಡ ಬೆನ್ನಿಗೇ ಗರಿಗೆದರಿದ್ದ ಕೃಷ್ಣ ಜನ್ಮಭೂಮಿ ವಿಚಾರ ಇದೀಗ ಚುರುಕು ಪಡೆದುಕೊಂಡಿದೆ. ಕೃಷ್ಣ ಜನ್ಮಭೂಮಿ ಬಳಿ ನಿರ್ಮಾಣ ಆಗಿರುವ ಮಸೀದಿ ತೆರವಿಗೆ ಕೋರಿ ಸಲ್ಲಿಸಿರುವ ಅರ್ಜಿ ಸ್ಥಳೀಯ ನ್ಯಾಯಾಲಯದಲ್ಲಿ ಸ್ವೀಕೃತಗೊಂಡಿದೆ.

ಮಥುರಾದ ಕೃಷ್ಣ ಜನ್ಮಭೂಮಿ ಬಳಿ ಇರುವ ಶಾಹಿ ಈದ್ಗಾ ಮಸೀದಿಯನ್ನು ತೆರವುಗೊಳಿಸುವಂತೆ ಅಕ್ಟೋಬರ್​ನಲ್ಲಿ ಅಲ್ಲಿನ ಸಿವಿಲ್ ಕೋರ್ಟ್​ನಲ್ಲಿ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಆ ಅರ್ಜಿ ತಿರಸ್ಕೃತವಾಗಿತ್ತು. ಇದೀಗ ಸಲ್ಲಿಕೆ ಆಗಿರುವ ಹೊಸ ಅರ್ಜಿ ಸಂಬಂಧ ಜಿಲ್ಲಾ ನ್ಯಾಯಾಧೀಶ ಸಾಧನಾ ರಾಣಿ ಠಾಕೂರ್​ ನವೆಂಬರ್ 18ಕ್ಕೆ ಮುಂದಿನ ವಿಚಾರಣೆ ನಿಗದಿಗೊಳಿಸಿದ್ದಾರೆ.

ಭಗವಾನ್​ ಶ್ರೀಕೃಷ್ಣ ಜನಿಸಿರುವ ಮಥುರಾದಲ್ಲಿನ ಕಾತ್ರ ಕೇಶವ ದೇವ ದೇವಸ್ಥಾನದ 13 ಎಕರೆ ಪ್ರದೇಶದೊಳಗೆ ಈ ಮಸೀದಿಯನ್ನು ನಿರ್ಮಿಸಲಾಗಿದೆ. ಅದನ್ನು ತೆರವುಗೊಳಿಸಬೇಕು ಎಂಬುದಾಗಿ ಅರ್ಜಿದಾರರು ಕೋರಿಕೊಂಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net