ಪಿಎಲ್ಡಿ ಬ್ಯಾಂಕ್ ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ: ಪ್ರಕಾಶ್ ಎಂ.ದೊಡ್ಡ ಕೊತ್ತಗೆರೆ ಅವಿರೋಧ ಆಯ್ಕೆ

PLD Bank Vice President Election Mandya
Published on

ಮಂಡ್ಯ: ಪ್ರಾಥಮಿಕ ಸಹಕಾರ ಗ್ರಾಮೀಣ ಅಭಿವೃದ್ಧಿ ಬ್ಯಾಂಕ್‌ನ ಉಪಾಧ್ಯಕ್ಷರಾಗಿ ಪ್ರಕಾಶ್ ಎಂ.ದೊಡ್ಡ ಕೊತ್ತಗೆರೆ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಅರವಿಂದ್ ಚಿಕ್ಕಬಳ್ಳಿ ಅವರ ಅವಧಿ ಮುಗಿದ ಹಿನ್ನೆಲೆ ತಮ್ಮ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ ಸಂಘದ ಕಚೇರಿಯಲ್ಲಿ ನಡೆದ ಚುನಾವಣಾ ಪ್ರಕ್ರಿಯೆಯಲ್ಲಿ ಉಪಾಧ್ಯಕ್ಷ ಸ್ಥಾನಕ್ಕೆ ಪ್ರಕಾಶ್ ಬಿಟ್ಟು ಬೇರೆ ಯಾರು ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿ ರವಿ ಅವಿರೋಧವಾಗಿ ಆಯ್ಕೆ ಘೋಷಣೆ ಮಾಡಿದರು.

ಅಭಿನಂದನೆ ಸ್ವೀಕರಿಸಿ ಮಾತನಾಡಿದ ಪ್ರಕಾಶ್, ನನ್ನನ್ನು ಒಮ್ಮತದಿಂದ ಅವಿರೋಧವಾಗಿ ಆಯ್ಕೆ ಮಾಡಿರುವುದು ಸಂತಸ ತಂದಿದೆ. ಎಲ್ಲ ಸದಸ್ಯರೊಂದಿಗೆ ಒಗ್ಗೂಡಿ ಅಭಿವೃದ್ಧಿ ಕೆಲಸದಲ್ಲಿ ಕೈಜೋಡಿಸುತ್ತೇನೆ ಎಂದರು.

ಪಿಎಲ್ಡಿ ಬ್ಯಾಂಕ್ ಅಧ್ಯಕ್ಷೆ ಸುನಂದಾ ಸಿದ್ದರಾಮು, ನಿರ್ದೇಶಕರಾದ ಬೇಲೂರು ಸೋಮಶೇಖರ್, ಅರವಿಂದ್ ಚಿಕ್ಕಬಳ್ಳಿ, ಎಚ್.ಸಿ. ಶಿವಲಿಂಗೇಗೌಡ ಹೊಸಹಳ್ಳಿ, ಬಿ.ಎಲ್.ಬೋರೇಗೌಡ, ಟಿ.ಬಿ.ಶಿವಲಿಂಗೇಗೌಡ, ಮರೀಗೌಡ, ಎಂ.ಯೋಗೇಶ್, ಬಿ.ಕೆ.ರಾಮೇಗೌಡ, ಚಿಕ್ಕ ಬೆಟ್ಟಯ್ಯ, ಬಿ.ಸವಿತಾ, ಸರಸ್ವತಿ, ಶಿವಾರ ನಂಜುಂಡ, ಎಂ .ಕೃಷ್ಣೇಗೌಡ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net