ಗಿಡಗಳ ಪೋಷಣೆ ಮುಖ್ಯ

vanita
ವನಿತಾ ವಿದ್ಯಾಲಯದಲ್ಲಿ ಮರಗಳಿಗೆ ರಿಬ್ಬನ್ ಕಟ್ಟುವ ಮೂಲಕ ಪರಿಸರ ರಕ್ಷಣೆಯ ಪ್ರತಿಜ್ಞೆ ಮಾಡಲಾಯಿತು. ಪ್ರೊ. ಶೇಖರ್ ಗೌಳೇರ್, ಎಂ.ಎನ್.ಸುಂದರರಾಜ್, ಪರಿಸರ ರಮೇಶ್ ಇತರರಿದ್ದರು.
Published on

ಶಿವಮೊಗ್ಗ: ಗಿಡಗಳನ್ನು ನೆಡುವುದಷ್ಟೇ ಮುಖ್ಯವಲ್ಲ. ಅವುಗಳ ರಕ್ಷಣೆ ಎಲ್ಲರ ಕರ್ತವ್ಯವಾಗಬೇಕು ಎಂದು ವೃಕ್ಷ ರಕ್ಷಾ ಸಮಿತಿ ಸಂಚಾಲಕ ಪ್ರೊ. ಶೇಖರ್ ಗೌಳೇರ್ ಹೇಳಿದರು.

ಕೀರ್ತಿನಗರ ವನಿತಾ ವಿದ್ಯಾಲಯದಲ್ಲಿ ಬುಧವಾರ ಏರ್ಪಡಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಮಾತನಾಡಿ, ವಿಶ್ವ ಪರಿಸರ ದಿನದ ಮಹತ್ವ ವಿವರಿಸಿದರು. ರಸಪ್ರಶ್ನೆ ಕಾರ್ಯಕ್ರಮ ನಡೆಸಿ ವಿಜೇತರಿಗೆ ಬಹುಮಾನ ವಿತರಿಸಿದರು. ವಿದ್ಯಾರ್ಥಿಗಳು ಮರಗಳ ರಕ್ಷಣೆಯ ಪ್ರತಿಜ್ಞೆ ಸ್ವೀಕರಿಸಿದರು.

ಪ್ರಮುಖರಾದ ಎಂ.ಎನ್.ಸುಂದರರಾಜ್, ಪರಿಸರ ರಮೇಶ್, ಸದಾನಂದ, ಮಮತಾ, ರಮ್ಯಾ ಮುಂತಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net