ಪ್ರೇಮ ವೈಫಲ್ಯದಿಂದ ವಿಮಾನ ಹಾರಾಟ ವೇಳೆ ಕಿಟಕಿ ಗಾಜು ಒಡೆದ ಮಹಿಳೆ: ಮುಂದೇನಾಯ್ತು ಗೊತ್ತಾ?

Woman
Published on

ಬೀಜಿಂಗ್​: ವಿಮಾನ ಹಾರಾಟ ಸಂದರ್ಭದಲ್ಲಿ ಪಾನಮತ್ತ ಮಹಿಳೆಯೊಬ್ಬಳು ಕಿಟಕಿ ಗಾಜನ್ನು ಒಡೆದ ಪರಿಣಾಮ ವಿಮಾನವು ತುರ್ತು ಭೂಸ್ಪರ್ಶ ಮಾಡಿದ ಘಟನೆ ಚೀನಾದಲ್ಲಿ ನಡೆದಿದೆ.

ಘಟನೆಯು ಕಳೆದ ತಿಂಗಳ ಮೇ 25ರಂದು ಚೀನಾದ ಸ್ವದೇಶಿ ಲೂಂಗ್​ ಏರ್​​ಲೈನ್ಸ್​ ವಿಮಾನದಲ್ಲಿ​ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. 29 ವರ್ಷದ ಲೀ ಎಂಬಾಕೆ ತನ್ನ ಭಾವನೆಗಳನ್ನು ನಿಯಂತ್ರಿಸಲಾಗದೇ ವಿಮಾನದ ಕಿಟಕಿ ಗಾಜನ್ನು ಒಡೆದಿದ್ದಾಳೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಇದನ್ನೂ ಓದಿ: ಮಹಿಳೆಯನ್ನು ಹೊತ್ತೊಯ್ದ ಮೊಸಳೆ ಬೇಟೆಯಾಡಿ ಹೊಟ್ಟೆ ಬಗೆದು ನೋಡಿದಾಗ ಕಾದಿತ್ತು ಶಾಕ್​!

ಲೀ ಅಳುತ್ತಾ ತನ್ನ ಸೀಟಿನ ಪಕ್ಕದಲ್ಲಿರುವ ಕಿಟಕಿ ಗಾಜನ್ನು ಒಡೆಯುತ್ತಿರುವ ಹಾಗೂ ಆಕೆಯನ್ನು ಸಹ ಪ್ರಯಾಣಿಕರು ಮತ್ತು ವಿಮಾನದ ಸಿಬ್ಬಂದಿ ಸಮಾಧಾನ ಪಡಿಸುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಆದಾಗ್ಯೂ ವಿಮಾನ ಕಿಟಕಿಯ ಮೊದಲ ಪದರ ಒಡೆದಿದ್ದರಿಂದ ಮುಂದೆ ಸಂಭವಿಸಬಹುದಾದ ಅನಾಹುತವನ್ನು ಮನಗಂಡು ಪೈಲಟ್​ಗಳು ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿದ್ದಾರೆ.

ವಿಮಾನವು ಕ್ಸಿನಿಂಗ್​ನಿಂದ ಪೂರ್ವ ಚೀನಾದ ಕರಾವಳಿ ತೀರ ಪ್ರದೇಶ ನಗರ ಯಾಂಚೆಂಗ್​ ತೆರಳುತ್ತಿತ್ತು. ಮಾರ್ಗಮಧ್ಯೆ ಮಹಿಳೆಯ ಹೈಡ್ರಾಮದಿಂದಾಗಿ ಹೆನಾನ್ಸ್​ ಪ್ರಾಂತ್ಯದ ರಾಜಧಾನಿ ಝೆಂಗ್​ಜೌನಲ್ಲಿನ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಲಾಗಿದೆ. ಇದನ್ನೂ ಓದಿ: ಚಿರು ಸಾವಿಗೆ ಸಾಂತ್ವನ ಹೇಳಿದ ರಾಘವೇಂದ್ರ ರಾಜ್​ಕುಮಾರ್​ ಕುಟುಂಬಕ್ಕೆ ಕಾನೂನು ಸಂಕಷ್ಟ

ಮಹಿಳೆ ಗಾಜು ಹೊಡೆಯಲು ಕಾರಣವೇನು?

ಸ್ನೇಹಿತ ಕೈಕೊಟ್ಟಿದ್ದರಿಂದ ಅದನ್ನು ಸಹಿಸಲಾಗದೇ ವಿಮಾನದ ಗಾಜನ್ನು ಹೊಡೆದಿದ್ದಾಳೆ ಎಂದು ಝೆಂಗ್​ಜೌ ನಗರದ ಪೊಲೀಸರು ತಿಳಿಸಿದ್ದಾರೆ. ವಿಮಾನ ಟೇಕಾಫ್​ ಆಗುವ ಮುನ್ನವೇ ಲೀ ಸುಮಾರು ಅರ್ಧ ಲೀಟರಿನಷ್ಟು ಮದ್ಯ ಸೇವಿಸಿದ್ದಳು ಎಂದು ತಿಳಿದುಬಂದಿದೆ. ಚೀನಾದ ಬೈಜು ಎಂದು ಕರೆಯಲ್ಪಡುವ ಧಾನ್ಯ ಆಲ್ಕೋಹಾಲ್ ಸೇವಿಸಿದ್ದಳು. ಇದರಲ್ಲಿ ಶೇ. 30 ರಿಂದ 60 ರಷ್ಟು ಆಲ್ಕೋಹಾಲ್​ ಅಂಶವಿರುತ್ತದೆ.

ಲೀ ರಕ್ತದಲ್ಲಿ 100 ಮಿಲಿ ಆಲ್ಕೋಹಾಲ್​ ಪ್ರಮಾಣವಿದೆ. ಸದ್ಯ ಆಕೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಮುಂದಿನ ಕಾನೂನು ಕ್ರಮಗಳನ್ನು ಜರುಗಿಸುತ್ತಿದ್ದಾರೆ. ದಂಡವನ್ನು ವಿಧಿಸಿ ಎಚ್ಚರಿಕೆಯನ್ನು ನೀಡಿ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. (ಏಜೆನ್ಸೀಸ್​) ಇದನ್ನೂ ಓದಿ: PHOTOS| ವೈರಲ್​ ಆಗ್ತಿದೆ ಹೆಬ್ಬುಲಿ ಬೆಡಗಿ ಅಮಲಾ ಪೌಲ್​ ಹಾಟ್​ ಬಿಕಿನಿ ಫೋಟೋ…!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net