

pilot sumit sabharwal funeral : ಜೂನ್ 12 ರಂದು ಅಹಮದಾಬಾದ್ನಲ್ಲಿ ಹೃದಯ ವಿದ್ರಾವಕ ವಿಮಾನ ಅಪಘಾತ ಸಂಭವಿಸಿದೆ. ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿ ಪೈಲಟ್ ಸುಮಿತ್ ಸಭರ್ವಾಲ್ ಸೇರಿದಂತೆ 241 ಪ್ರಯಾಣಿಕರು ಸಾವನ್ನಪ್ಪಿದರು. ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ದೇಹವನ್ನು ಇಂದು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಯಿತು, ನಂತರ ಅವರ ಅಂತಿಮ ಯಾತ್ರೆ ನಡೆಸಲಾಯಿತು. ಈ ವೇಳೆ ಮೃತ ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ತಂದೆ ಕಣ್ಣೀರು ಹಾಕುತ್ತಾ ಮಗನ ಅಂತ್ಯಕ್ರೀಯೆ ನಡೆಸಿದ್ದಾರೆ.
ಕ್ಯಾಪ್ಟನ್ ಸುಮಿತ್ ಸಭರ್ವಾಲ್ ಅವರ ತಂದೆ ಪುಷ್ಕರ್ರಾಜ್ ಮುಂಬೈನ ಪೊವೈನಲ್ಲಿರುವ ತಮ್ಮ ಮನೆಯ ಹೊರಗೆ ತಮ್ಮ ಮಗನಿಗೆ ಭಾವನಾತ್ಮಕವಾಗಿ ಗೌರವ ಸಲ್ಲಿಸಿದರು. ಪೈಲಟ್ ಮಗನ ಮರಣದ ನಂತರ ವೃದ್ಧ ತಂದೆಯ ಸ್ಥಿತಿ , ಮಗ ಕೈ ಮುಗಿದು ಕಣ್ಣೀರು ಹಾಕುತ್ತಾ ನೋಡುತ್ತಿರುವ ಈ ದೃಶ್ಯವು ಕಣ್ಣೀರು ತರಿಸುವಂತೆ ಇತ್ತು.
ಸುಮಿತ್ ಸಭರ್ವಾಲ್ ಅವರ ತಂದೆಗೆ 88 ವರ್ಷ. ಕೆಲಸದ ಕಾರಣದಿಂದಾಗಿ ಅವರೊಂದಿಗೆ ಹೆಚ್ಚು ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಇಂದು, ಸುಮಿತ್ ಸಭರ್ವಾಲ್ ಅವರ ದೇಹವು ಅವರ ಮನೆಗೆ ತಲುಪಿದಾಗ, ಅವರ ವೃದ್ಧ ತಂದೆಯ ಕಣ್ಣುಗಳಲ್ಲಿ ಅಸಹಾಯಕತೆ ಮತ್ತು ನೋವಿನ ಅಲೆಗಳು ಇದ್ದವು, ಇದು ಒಬ್ಬ ತಂದೆ ತನ್ನ ಬೆಂಬಲವನ್ನು ಮಾತ್ರವಲ್ಲದೆ ತನ್ನ ಪ್ರಪಂಚವನ್ನೂ ಕಳೆದುಕೊಂಡಿದ್ದಾರೆ ಎಂಬುದನ್ನು ವ್ಯಕ್ತಪಡಿಸಿತು. ಕೈ ಮುಗಿದು ಅಂತಿಮ ವಿದಾಯ ಹೇಳುವಾಗ ತಂದೆಯ ಮುರಿದ ಹೃದಯ ಎಲ್ಲರ ಕಣ್ಣಲ್ಲಿ ನೀರು ತರಿಸಿತು.
ಸುಮಿತ್ ಆಗಾಗ್ಗೆ ಹೇಳುತ್ತಿದ್ದರಂತೆ, ಈಗ ನಿವೃತ್ತಿ ತೆಗೆದುಕೊಂಡು ತಂದೆಯನ್ನು ನೋಡಿಕೊಳ್ಳಬೇಕು. 88 ವರ್ಷದ ತಂದೆ ತಮ್ಮ 60 ವರ್ಷದ ಮಗನ ಸಾವಿನ ಸುದ್ದಿ ಕೇಳಿ ತೀವ್ರ ಆಘಾತಕ್ಕೊಳಗಾಗಿದ್ದಾರೆ. ಕ್ಯಾಪ್ಟನ್ ಇಂದು ಪಂಚಭೂತಗಳಲ್ಲಿ ವಿಲೀನಗೊಂಡರು. ಕ್ಯಾಪ್ಟನ್ ಸಭರ್ವಾಲ್ ಅವರನ್ನು ಚಕಲಾದಲ್ಲಿರುವ ಹಿಂದೂ ಸ್ಮಶಾನದಲ್ಲಿ ಅಂತ್ಯಕ್ರಿಯೆ ಮಾಡಲಾಯಿತು.
ಕ್ಯಾಪ್ಟನ್ ಸಭರ್ವಾಲ್ ಬಹಳ ಅನುಭವಿ ಪೈಲಟ್ ಆಗಿದ್ದರು. ಅವರಿಗೆ 8,200 ಗಂಟೆಗಳಿಗೂ ಹೆಚ್ಚು ಹಾರಾಟದ ಅನುಭವವಿತ್ತು. ಈ ಅಪಘಾತದಲ್ಲಿ, ಸಭರ್ವಾಲ್ ಸೇರಿದಂತೆ ವಿಮಾನದಲ್ಲಿದ್ದ 241 ಜನರು ಪ್ರಾಣ ಕಳೆದುಕೊಂಡರು.