ದಕ್ಷಿಣ ಕೊರಿಯಾ ಬೆನ್ನಲ್ಲೇ ಮತ್ತೊಂದು Plane ಪತನ; ಇಬ್ಬರು ಸಾವು, 18 ಮಂದಿ ಗಂಭೀರ

Plane Crash
Published on

ಕ್ಯಾಲಿಫೋರ್ನಿಯಾ: ವಾಣಿಜ್ಯ ಕಟ್ಟಡವೊಂದಕ್ಕೆ ಸಿಂಗಲ್ ಇಂಜಿನ್ ವಿಮಾನವೊಂದು (Plane) ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಮೃತಪಟ್ಟು, 18 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ದಕ್ಷಿಣ ಕ್ಯಾಲಿಫೋರ್ನಿಯಾದಲ್ಲಿ ನಡೆದಿದೆ.  ಲಾಸ್ ಏಂಜಲೀಸ್‌ನಿಂದ ಸುಮಾರು 25 ಕಿಲೋಮೀಟರ್ ದೂರದಲ್ಲಿರುವ ಫುಲ್ಲರ್‌ಟನ್ ಮುನ್ಸಿಪಲ್ ಏರ್‌ಪೋರ್ಟ್‌ ಬಳಿ ಈ ಘಟನೆ ನಡೆದಿದ್ದು, ಜನವರಿ 02ರ ಮಧ್ಯಾಹ್ನ 02 ಘಂಟೆ ಸುಮಾರಿಗೆ ದುರಂತ ಸಂಭವಿಸಿದೆ.

ದುರಂತ ನಡೆದ ಸ್ಥಳದಲ್ಲಿ ಪೀಠೋಪಕರಣ ತಯಾರಿಕಾ ಕಂಪನಿ ಇತ್ತು ಎಂದು ಹೇಳಲಾಗಿದ್ದು, ಕಟ್ಟಡದಲ್ಲಿದ್ದ ಜನರನ್ನು ಅಧಿಕಾರಿಗಳು ಸ್ಥಳಾಂತರಿಸಿದ್ದಾರೆ. ಘಟನೆ ನಡೆದಾಗ ವಿಮಾನದಲ್ಲಿ ಎಷ್ಟು ಜನರಿದ್ದರು ಎಂಬುದು ಇನ್ನಷ್ಟೇ ತಿಳಿಯಬೇಕಿದೆ. 

ವಿಮಾನ (Plane) ಕಟ್ಟಡಕ್ಕೆ ಡಿಕ್ಕಿ ಹೊಡೆಯುತ್ತಿರುವ ವಿಡಿಯೋ ವೈರಲ್​ ಆಗಿದ್ದು, ಅಗ್ನಿಶಾಮಕದಳದ ಅಧಿಕಾರಿಗಳು ಹಾಗೂ ಸ್ಥಳೀಯರು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net