ಯೋಜನೆಯಿಂದ ಸ್ವಾವಲಂಬಿ ಜೀವನ ಸಾಗಿಸಲು ಪ್ರಯೋಜನ; ಬಸವರಾಜ

28-RNR-04
Published on

ರಾಣೆಬೆನ್ನೂರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಾಡಿನ ಎಲ್ಲ ಗ್ರಾಮದ ಸದಸ್ಯರಿಗೆ ಉತ್ತಮ ರೀತಿ ಸಹಕಾರ ಕೊಟ್ಟಿದೆ. ಇದರಿಂದ ಜನರಿಗೆ ಆಥಿರ್ಕ ಸ್ವಾವಲಂಬನೆ ಜೀವನ ಸಾಗಿಸಲು ಪ್ರಯೋಜನವಾಗಿದೆ ಎಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸದಸ್ಯ ಬಸವರಾಜ ಹುಲ್ಲತ್ತಿ ಹೇಳಿದರು.

ನಗರದ ಕಾಕಿ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಭಾನುವಾರ ಸಂಜೆ ಏರ್ಪಡಿಸಿದ್ದ ಪ್ರಗತಿ ಬಂಧು ಸ್ವ ಸಹಾಯ ಸಂಗಳ ಒಕ್ಕೂಟದ ಪದಾಧಿಕಾರಿಗಳ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಯೋಜನೆ ವತಿಯಿಂದ ಸಮಾಜದಲ್ಲಿ ಮಹಿಳೆಯರು ಸ್ವಾವಲಂಬಿ ಜೀವನ ನಡೆಸಲು ಅನುಕೂಲವಾಗಿದೆ. ಇನ್ನೂ ಹೆಚ್ಚಿನ ಜನತೆ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸ್ವಾಭಿಮಾನಿ ಕರವೇ ರಾಜ್ಯಾಧ್ಯಕ್ಷ ನಿತ್ಯಾನಂದ ಕುಂದಾಪುರ, ಯೋಜನೆಯ ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು, ಐಡಿಬಿಐ ಬ್ಯಾಂಕ್​ನ ವ್ಯವಸ್ಥಾಪಕ ಪ್ರಸನ್ನಕುಮಾರ, ಬುಳ್ಳಪ್ಪ ಬಣಕಾರ, ತಾಲೂಕು ಯೋಜನಾಧಿಕಾರಿ ಎಂ.ಪಿ. ಮಂಜುನಾಥ ಹಾಗೂ ಸೇವಾಪ್ರತಿನಿಧಿಗಳು, ಒಕ್ಕೂಟ ಪದಾಧಿಕಾರಿಗಳು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net