ಕಡಿಮೆ ಟಿಪ್ಸ್​​ ನೀಡಿದ್ದಕ್ಕೆ ಗರ್ಭಿಣಿಗೆ ಚಾಕುವಿನಿಂದ 14 ಬಾರಿ ಇರಿತ; Pizza Delivery Worker ಹೇಯ ಕೃತ್ಯ

Pizza Delivery
Published on

ಫ್ಲೋರಿಡಾ​: ಕಡಿಮೆ ಟಿಪ್ಸ್​ ನೀಡಿದರು ಎಂಬ ಕಾರಣಕ್ಕೆ ಪಿಜ್ಜಾ ಡೆಲಿವರಿ ವರ್ಕರ್ (Pizza Delivery Worker)​ ಒಬ್ಬರು ಗರ್ಭಿಣಿಯೊಬ್ಬರಿಗೆ 14 ಬಾರಿ ಇರಿದಿರುವ ಘಟನೆ ಅಮೆರಿಕದ ಫ್ಲೋರಿಡಾದಲ್ಲಿ ನಡೆದಿದೆ.

ಆರೋಪಿಯನ್ನು ಬ್ರಿಯಾನ್ನಾ ಅಲ್ವೆಲೊ (22) ಎಂದು ಗುರುತಿಸಲಾಗಿದ್ದು, ಪಿಜ್ಜಾ ಡೆಲಿವರಿ ವರ್ಕರ್​ಗೆ (Pizza Delivery Worker) $2 ಟಿಪ್ಸ್​ ನೀಡಿದರು ಎಂಬ ಕಾರಣಕ್ಕೆ ಸಂತ್ರಸ್ತೆಯನ್ನು ಜನುಮದಿನದಂದೇ ಭೀಕರವಾಗಿ ಹಲ್ಲೆ ಮಾಡಲಾಗಿದೆ. 

ಘಟನೆ ಕುರಿತು ಮಾತನಾಡಿರುವ ಪೊಲೀಸ್​ ಅಧಿಕಾರಿಯೊಬ್ಬರು, ಘಟನೆ ನಡೆದ ವೇಳೆ ಸಂತ್ರಸ್ತೆ, ಆಕೆಯ ಸ್ನೇಹಿತ ಹಾಗೂ ಐದು ವರ್ಷದ ಮಗಳು ಹೋಟೆಲ್​ ರೂಮಿನಲ್ಲಿದ್ದರು. ಈ ವೇಳೆ 2,800 ರೂ. ಮೌಲ್ಯದ ಪಿಜ್ಜಾ ಆರ್ಡರ್​ ಮಾಡಿದ್ದಾರೆ. ಅದರಂತೆ ಬ್ರಿಯಾನ್ನಾ ಅಲ್ವೆಲೊ ಪಿಜ್ಜಾ ತಂದುಕೊಟ್ಟಿದ್ದು, 2 ಡಾಲರ್​ಅನ್ನು ಟಿಪ್ಸ್​ ಆಗಿ ನೀಡಲಾಗಿದ್ದು, ಆಕೆ ಹೋಟೆಲ್​ನಿಂದ ತೆರಳಿದ್ದಾಳೆ. 

ಸುಮಾರು 90 ನಿಮಿಷಗಳ ಬಳಿಕ ಆರೋಪಿ ತನ್ನ ಸಹಚರರೊಂದಿಗೆ ಮಹಿಳೆ ಇದ್ದ ಹೋಟೆಲ್​ಗೆ ಬಂದಿದ್ದು, ಆಕೆಯ ಮೇಲೆ ಹಲ್ಲೆ ಮಾಡಿ 14 ಬಾರಿ ಚಾಕುವಿನಿಂದ ಇರಿದು ಕೊಂದು ಪರಾರಿಯಾಗಿದ್ದಾಳೆ. ವಿಚಾರ ತಿಳಿದ ಅಧಿಕಾರಿಗಳು ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ವರದಿಯಾಗಿದೆ. ಆರೋಪಿಗಳನ್ನು ಬಂಧಿಸಲಾಗಿದ್ದು, ಅವರನ್ನು  ಓಸ್ಸಿಯೋಲಾ ಕೌಂಟಿ ಜೈಲಿನಲ್ಲಿ  ಇರಿಸಲಾಗಿದೆ ಎಂದು ಪೊಲೀಸ್​ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net