ದೆಹಲಿ ವೈನ್ ಶಾಪ್‌ನಲ್ಲಿ 'ಪಿಂಕ್' ಕ್ರಾಂತಿ: ಮಹಿಳೆಯರಿಗಾಗಿಯೇ ಬಂತು 'ಹಲೋ ಕಿಟ್ಟಿ' ಥೀಮ್‌ ಕೌಂಟರ್! | Women Liquor Counter

ದೆಹಲಿಯ ವಿಕಾಸ್‌ಪುರಿಯಲ್ಲಿ ಮಹಿಳೆಯರಿಗಾಗಿ ಮೊದಲ ಬಾರಿಗೆ ವಿಶೇಷ ಮದ್ಯದ ಕೌಂಟರ್ ಆರಂಭಗೊಂಡಿದೆ! ಹಲೋ ಕಿಟ್ಟಿ ಥೀಮ್ ಹಾಗೂ ಆಕರ್ಷಕ ಗುಲಾಬಿ ಬಣ್ಣದ ಅಲಂಕಾರದಿಂದ ಕೂಡಿರುವ ಈ ಮಳಿಗೆಯ ವಿಡಿಯೋ ಈಗ ಸೋಷಿಯಲ್ ಮೀಡಿಯಾದಲ್ಲಿ ಸಕ್ಕತ್ ವೈರಲ್ ಆಗಿದೆ.
Women Liquor Counter
ದೆಹಲಿಯಲ್ಲಿ 'ಮಹಿಳಾ ವೈನ್ ಶಾಪ್'
Published on: 

Hello Kitty Theme: ಮದ್ಯದಂಗಡಿಗಳ ಮುಂದೆ ಸಾಲಿನಲ್ಲಿ ನಿಲ್ಲಲು ಸಾಮಾನ್ಯವಾಗಿ ಮಹಿಳೆಯರು ಹಿಂಜರಿಯುವುದುಂಟು. ಆದರೆ, ಈ ಮುಜುಗರಕ್ಕೆ ವಿನೂತನ ತೆರೆ ಎಳೆದಿರುವ ದೆಹಲಿಯ ವೈನ್ ಶಾಪ್‌ ಒಂದರ ವಿಡಿಯೋ ಸದ್ಯ ಇಂಟರ್ನೆಟ್‌ನಲ್ಲಿ ಸಕ್ಕತ್ ವೈರಲ್ ಆಗಿದೆ.

ದೆಹಲಿಯ ವಿಕಾಸ್‌ಪುರಿಯಲ್ಲಿರುವ 'ಸರ್ಕಾರಿ ವೈನ್ ಮತ್ತು ಬಿಯರ್ ಅಂಗಡಿ' (GOVT. WINE & BEER SHOP) ಮಹಿಳಾ ಗ್ರಾಹಕರಿಗಾಗಿ ಪ್ರತ್ಯೇಕ ಕೌಂಟರ್ ಒಂದನ್ನು ಪರಿಚಯಿಸಿದೆ. ವಿಶೇಷವೆಂದರೆ, ಈ ಕೌಂಟರ್ ಅನ್ನು ಸಾಮಾನ್ಯ ಮಳಿಗೆಗಳಂತೆ ಮಾಡದೆ, ಸಂಪೂರ್ಣವಾಗಿ ಗುಲಾಬಿ (Pink) ಬಣ್ಣ, ಮುದ್ದಾದ ಹಲೋ ಕಿಟ್ಟಿ ಸ್ಟಿಕ್ಕರ್‌ಗಳು ಹಾಗೂ ಟೆಡ್ಡಿ ಬೇರ್‌ಗಳಿಂದ ಅಲಂಕರಿಸಲಾಗಿದೆ.

ಮಹಿಳೆಯರ ಸುರಕ್ಷತೆಗಾಗಿ ಹೊಸ ಪ್ಲ್ಯಾನ್​

ಮಹಿಳೆಯರಿಗೆ ಹೆಚ್ಚು ಆರಾಮದಾಯಕ, ಸುರಕ್ಷಿತ ಹಾಗೂ ಸುಲಭವಾಗಿ ಮದ್ಯ ಖರೀದಿಸಲು ಅನುಕೂಲವಾಗುವಂತೆ ಈ ವಿನೂತನ ಹೆಜ್ಜೆ ಇಡಲಾಗಿದೆ ಎಂದು ಮಳಿಗೆಯ ಆಡಳಿತ ಮಂಡಳಿ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋ ಹಂಚಿಕೊಂಡಿದೆ.

Delhi 'Pink' Wine Shop
ವೈನ್ ಶಾಪ್‌ನಲ್ಲಿ ಮಹಿಳೆಯರಿಗೆ ಪ್ರತ್ಯೇಕ ಕೌಂಟರ್

ಪ್ರಗತಿಪರ ನಗರ ಯೋಜನೆಯ ಮಾದರಿಯಾಗಿರುವ ಈ ವಿಡಿಯೋಗೆ ನೆಟ್ಟಿಗರು ಫಿದಾ ಆಗಿದ್ದಾರೆ. ‘ಟೆಡ್ಡಿ ಬೇರ್‌ಗಳಿಂದ ಅಲಂಕರಿಸಿರುವುದು ತುಂಬಾ ಮುದ್ದಾಗಿದೆ’ ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಯಾವ ಪ್ಯಾಂಟ್ ಜತೆ ಯಾವ ಶರ್ಟ್ ಹಾಕಿದ್ರೆ ಹ್ಯಾಂಡ್ಸಮ್ ಕಾಣ್ತೀರಾ?: ಮೆನ್ಸ್ ಫ್ಯಾಷನ್‌ನ ಸಿಂಪಲ್ ಟಿಪ್ಸ್! | Men fashion

ಇತ್ತ ’ನಾನು ತಕ್ಷಣವೇ ವಿಕಾಸ್‌ಪುರಿಗೆ ಶಿಫ್ಟ್ ಆಗಬೇಕು’ ಎಂದು ಕೆಲವರು ತಮಾಷೆಯಾಗಿ ಪ್ರತಿಕ್ರಿಯೆ ನೀಡಿದ್ದಾರೆ. ಮಹಿಳೆಯರ ಅನುಕೂಲಕ್ಕಾಗಿ ಮದ್ಯದ ಅಂಗಡಿಗಳಲ್ಲಿ ಈ ರೀತಿಯ ಬದಲಾವಣೆ ತಂದಿರುವುದು ದೇಶಾದ್ಯಂತ ಈಗ ಚರ್ಚೆಗೆ ಗ್ರಾಸವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net