ಗರ್ಭಿಣಿಯರು ನಮ್ಮ ಸಿನಿಮಾ ವೀಕ್ಷಿಸಬೇಡಿ! ಮನವಿ ಮಾಡಿದ 'ಪಿಂಡಮ್' ಚಿತ್ರತಂಡ

ವಿಜಯವಾಣಿ (55)
Published on

ಬೆಂಗಳೂರು: ಕನ್ನಡ ಚಿತ್ರರಂಗದ ನಟಿ, 'ದಿಯಾ' ಖ್ಯಾತಿಯ ಕುಶೀ ರವಿ ಮುಖ್ಯಭೂಮಿಕೆಯಲ್ಲಿ ನಟಿಸಿರುವ ತೆಲುಗು ಹಾರರ್​ ಸಿನಿಮಾ 'ಪಿಂಡಮ್' ಇದೀಗ ಬಹುತೇಕ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧಗೊಂಡಿದ್ದು, ಸದ್ಯ ಚಿತ್ರತಂಡ ಹಾರರ್ ಜಾನರ್ ಇಷ್ಟಪಡುವ ಚಿತ್ರಪ್ರೇಮಿಗಳಿಗೆ ವಿಶೇಷ ಮನವಿಯೊಂದನ್ನು ರವಾನಿಸಿದೆ.

​ಮುಖ್ಯಭೂಮಿಕೆಯಲ್ಲಿರುವ ಶ್ರೀರಾಮ್ ಮತ್ತು ಕುಶೀ ಅಭಿನಯದ ಹಾರರ್ ಡ್ರಾಮಾ 'ಪಿಂಡಮ್' ಇದೇ ಡಿಸೆಂಬರ್ 15, 2023 ರಂದು ಥಿಯೇಟರ್‌ಗಳಿಗೆ ಲಗ್ಗೆಯಿಡಲು ತಯಾರಾಗಿದೆ. ಚಿತ್ರದ ನಿರ್ದೇಶಕರಾದ ಸಾಯಿಕಿರಣ್ ದೈದಾ ಚಿತ್ರ ರಿಲೀಸ್ ಆಗುತ್ತಿರುವ ಹಿನ್ನೆಲೆ ಪ್ರೇಕ್ಷಕರಲ್ಲಿ ಒಂದು ವಿಶೇಷ ಮನವಿ ಮಾಡಿದ್ದು, ಅತೀ ಮುಖ್ಯವಾಗಿ ಗರ್ಭಿಣಿಯರಿಗೆ ತಿಳಿಸಿದ್ದಾರೆ.

ಹಲವಾರು ಕಡಿತಗಳ ನಂತರ ಸೆನ್ಸಾರ್ ಮಂಡಳಿಯು ಚಲನಚಿತ್ರಕ್ಕೆ 'ಎ' ರೇಟಿಂಗ್ ಅನ್ನು ನಿಗದಿಪಡಿಸಿದೆ. ಅದೇ ಸಮಯದಲ್ಲಿ ತಂಡವು ಕಟ್ಟುನಿಟ್ಟಾದ ಹಕ್ಕು ನಿರಾಕರಣೆ ಹೊರಡಿಸಿದ್ದು, ಗರ್ಭಿಣಿಯರು 'ಪಿಂಡಮ್' ಸಿನಿಮಾ ವೀಕ್ಷಿಸುವುದು ಸೂಕ್ತವಲ್ಲ ಎಂದು ಎಚ್ಚರಿಸಿದೆ.

ಸದ್ಯ ಈ ವಿಷಯ ಇದೀಗ ಪ್ರೇಕ್ಷಕರಲ್ಲಿ ಭಾರೀ ಕುತೂಹಲ ಮೂಡಿಸಿದೆ. ಚಿತ್ರಕ್ಕೆ ಕೃಷ್ಣ ಸೌರಭ್ ಸಂಗೀತ ಸಂಯೋಜಿಸಿದ್ದು, ಕಲಾಹಿ ಮೀಡಿಯಾ ಅಡಿಯಲ್ಲಿ ಯಶವಂತ ದಗ್ಗುಮಟಿ ಚಿತ್ರವನ್ನು ನಿರ್ಮಿಸಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net