

ಚೆನ್ನೈ: ದಕ್ಷಿಣ ಭಾರತದ ಖ್ಯಾತ ನಟಿ ನಯನತಾರಾ ಮತ್ತು ನಿರ್ದೇಶಕ ವಿಘ್ನೇಶ್ ಶಿವನ್ ಗುರುವಾರ ಹಿಂದು ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಸಪ್ತಪದಿ ತುಳಿದ ಈ ಜೋಡಿಯ ಸುಮಧುರ ಕ್ಷಣಗಳ ಫೊಟೋಗಳು ಇಲ್ಲಿವೆ.
ಮಹಾಬಲಿಪುರಂನ ರೆಸಾರ್ಟ್ನಲ್ಲಿ ನಡೆದ ನಯನತಾರಾ ಅವರ ಮದುವೆಯಲ್ಲಿ ಶಾರುಖ್ ಖಾನ್, ರಜಿನಿಕಾಂತ್, ವಿಜಯ್ ಸೇತುಪತಿ, ತಲಾ ಅಜಿತ್, ಸೂರ್ಯ ಸೇರಿದಂತೆ ಅನೇಕ ಗಣ್ಯರು, ಕುಟುಂಬದ ಆಪ್ತರು ಮತ್ತು ಸ್ನೇಹಿತರು ಪಾಲ್ಗೊಂಡಿದ್ದರು.
ಈ ಮದುವೆಯ ದೃಶ್ಯ ಪ್ರಸಾರದ ಹಕ್ಕನ್ನ 10 ಕೋಟಿ ರೂ.ಗೆ ಈ ಜೋಡಿ ಸೇಲ್ ಮಾಡಿದೆ ಎನ್ನಲಾಗಿದೆ.
ವಿಘ್ನೇಶ್ ಮತ್ತು ನಯನತಾರಾ ಅವರ ಮದುವೆ ಮೊದಲಿಗೆ ತಿರುಪತಿ ತಿರುಮಲ ದೇವಸ್ಥಾನದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಕೊನೇ ಹಂತದಲ್ಲಿ ಸ್ಥಳ ಬದಲಾವಣೆ ಆಗಿದ್ದು, ತಿರುಪತಿ ಬದಲು ಮಹಾಬಲಿಪುರಂನ ರೆಸಾರ್ಟ್ನಲ್ಲಿ ಮದುವೆ ನಡೆಯಿತು. (ಏಜೆನ್ಸೀಸ್)