

ನವದೆಹಲಿ: ಕರೊನಾ ಸೋಂಕು ಪೀಡಿತರ ನೆರವಿಗೆ ಕೇಂದ್ರ ಸರ್ಕಾರ ಸಾರ್ವಜನಿಕರಿಂದ ನಿಧಿ ಸಂಗ್ರಹಿಸಲು ಮುಂದಾಗಿರುವ ಬೆನ್ನ ಹಿಂದಯೇ ನಕಲಿ ಖಾತೆಗಳು ಸೃಷ್ಟಿಯಾಗಿವೆ ಎಂದು ಭಾರತೀಯ ಸ್ಟೇಟ್ ಬ್ಯಾಂಕ್ ಎಚ್ಚರಿಕೆ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ಅವರು, ಕರೊನಾ ಮಾರಿ ಓಡಿಸಲು ಸಾರ್ವಜನಿಕರು ಉದಾರವಾಗಿ ದೇಣಿಗೆ ನೀಡಬೇಕು ಎಂದು ಕೋರಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಕೆಲವರು ನಕಲಿ ಖಾತೆ ಸೃಷ್ಟಿಸಿ ಹಣ ದೋಚಲು ಮುಂದಾಗಿದ್ದಾರೆ.
ನಕಲಿ ಐಡಿ: ಪಿಎಂ ಕೇರ್ಸ್ ಫಂಡ್ ಯುಪಿಐ ಐಡಿ pmcare@upi ಎಂಬ ಹೆಸರಿನಲ್ಲಿ ಹಣ ಕಳಿಸುವಂತೆ ಮನವಿ ಬಂದರೆ ಈ ಐಡಿಗೆ ಹಣ ಕಳುಹಿಸಬೇಡಿ ಎಂದು ಕೇಂದ್ರ ಸರ್ಕಾರ ಸಾರ್ವಜನಿಕರಲ್ಲಿ ಮನವಿ ಮಾಡಿದೆ.
ದೇಣಿಗೆ ನೀಡುವ ಸಾರ್ವಜನಿಕರು PM Cares Fundನ ಯುಪಿಐ ಐಡಿ pmcares@sbi. ಗೆ ಹಣ ನೀಡಬಹುದು ಎಂದು ಕೇಂದ್ರ ಸರ್ಕಾರ ತಿಳಿಸಿದೆ. (ಏಜೆನ್ಸೀಸ್)