ಪ್ರತಿಯೊಬ್ಬರೂ 6 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿ

3-RNR-07
Published on

ರಾಣೆಬೆನ್ನೂರ: ಇಂದಿನ ಬದಲಾದ ಆಹಾರ ಪದ್ಧತಿಯಿಂದಾಗಿ ಹೃದಯ ಸಂಬಂಧಿ ಕಾಯಿಲೆಗಳು ಹೆಚ್ಚುತ್ತಿದ್ದು, ಪ್ರತಿಯೊಬ್ಬರೂ ಪ್ರತಿ 6 ತಿಂಗಳಿಗೊಮ್ಮೆ ಹೃದಯ ತಪಾಸಣೆ ಮಾಡಿಸಿಕೊಳ್ಳುವ ಅಗತ್ಯವಿದೆ ಎಂದು ಶಹರ ಠಾಣೆ ಸಿಪಿಐ ಡಾ. ಶಂಕರ ಎಸ್​.ಕೆ. ಹೇಳಿದರು.

ನಗರದ ನಾಗಶಾಂತಿ ಎಜುಕೇಷನಲ್​ ಚಾರಿಟೇಬಲ್​ ಟ್ರಸ್ಟ್​ ಹಾಗೂ ದಾವಣಗೆರೆ ನಾರಾಯಣ ಹೃದಯಾಲಯ ಸೂಪರ್​ ಸ್ಪೆಷಾಲೆಟಿ ಸೆಂಟರ್​ ವತಿಯಿಂದ ಗುರುವಾರ ನಗರದ ನಾಗಶಾಂತಿ ಕಾಲೇಜ್​ನಲ್ಲಿ ಏರ್ಪಡಿಸಿದ್ದ ಉಚಿತ ಹೃದಯ ಹಾಗೂ ಚರ್ಮ ತಪಾಸಣೆ ಶಿಬಿರದಲ್ಲಿ ಅವರು ಮಾತನಾಡಿದರು.

ಲಯನ್ಸ್​ ಕ್ಲಬ್​ನ ಅಧ್ಯಕ್ಷ ಎಸ್​.ಬಿ. ಗುರಿಕಾರ ಶಿಬಿರ ಉದ್ಘಾಟಿಸಿದರು. ಸಂಸ್ಥೆಯ ಮಹಾಪೋಷಕ ಬಿ.ಎನ್​. ಪಾಟೀಲ ಅಧ್ಯಕ್ಷತೆ ವಹಿಸಿದ್ದರು. 60 ಜನರಿಗೆ ಹೃದಯ ಹಾಗೂ 20 ಜನರಿಗೆ ಚರ್ಮ ತಪಾಸಣೆ ಮಾಡಲಾಯಿತು.

ಹೃದಯ ತಜ್ಞ ಡಾ. ರಾಕೇಶ, ಡಾ. ರಚನಾ ಪಾಟೀಲ, ಪ್ರಾಚಾರ್ಯ ಗಣೇಶ ಪಂಡಿತ, ಬಿ.ಬಿ. ನಂದ್ಯಾಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net