ರಾಜ್ಯಪಾಲರಿಂದ ಪದವಿ ಪಡೆಯಲು ನಿರಾಕರಿಸಿದ ಪಿಎಚ್‌ಡಿ ವಿದ್ಯಾರ್ಥಿನಿ! ಕಾರಣವೇನು ಗೊತ್ತಾ?.. PhD Scholar

phd tamilnadu
Published on

PhD Scholar :  ತಮಿಳುನಾಡಿನ ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದ 32 ನೇ ಘಟಿಕೋತ್ಸವ ಬುಧವಾರ (ಆಗಸ್ಟ್ 13) ನಡೆಯಿತು. ಈ ಕಾರ್ಯಕ್ರಮದಲ್ಲಿ ತಮಿಳುನಾಡು ರಾಜ್ಯಪಾಲ ಆರ್.ಎನ್. ರವಿ ಮುಖ್ಯ ಅತಿಥಿಯಾಗಿದ್ದರು. ಎಲ್ಲಾ ಸಂಶೋಧನಾ ವಿದ್ಯಾರ್ಥಿಗಳಿಗೆ ರಾಜ್ಯಪಾಲ ರವಿ ಪದವಿ ಪ್ರದಾನ ಮಾಡಿದ್ದಾರೆ. ಆದರೆ  ಯುವತಿಯೊಬ್ಬಳು ಇವರಿಂದ ಪದವಿ ಪಡೆಯಲು ನಿರಾಕರಿಸಿದ್ದಾರೆ. ಈ ಕುರಿತಾದ ವಿಡಿಯೋ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್​ ಆಗಿದೆ. ಇದ ಹಿಂದೆ ಕಾರಣ ಇದೆ ಎನ್ನಲಾಗಿದೆ.

ವಿಡಿಯೋದಲ್ಲಿ ಏನಿದೆ?:

ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ ಮೈಕ್ರೋಫೈನಾನ್ಸ್‌ನಲ್ಲಿ ಡಾಕ್ಟರೇಟ್ ಪದವಿ ನಡೆಯುತ್ತಿತ್ತು. ರಾಜ್ಯಪಾಲ ಆರ್.ಎನ್. ರವಿ ಮುಖ್ಯ ಅತಿಥಿಯಾಗಿದ್ದರು. ಎಲ್ಲಾ ವಿದ್ಯಾರ್ಥಿಗಳಿಗೆ ರಾಜ್ಯಪಾಲ ರವಿ ಪದವಿ ಪ್ರದಾನ ಮಾಡುತ್ತಿದ್ದರು. ವೇದಿಕೆ ಮೇಲೆ ಬಂದಿರುವ ವಿದ್ಯಾರ್ಥಿನಿ ರಾಜ್ಯಪಾಲರು, ರಾಜ್ಯಪಾಲರ ಮಾತುಗಳನ್ನು ಲೆಕ್ಕಿಸದೆ, ಉದ್ದೇಶಪೂರ್ವಕವಾಗಿ ಇವರಿಂದ ಪದವಿ ಪಡೆಯಲು ನಿರಾಕರಿಸಿದ್ದಾರೆ.ರಾಜ್ಯಪಾಲರು ಸಹ ವೀಡಿಯೊದಲ್ಲಿ ಒಪ್ಪಿಗೆ ಸೂಚಿಸುತ್ತಾ ತಲೆಯಾಡಿಸುತ್ತಿರುವುದು ಕಂಡುಬರುತ್ತದೆ. ವಿಸಿ ಚಂದ್ರಶೇಖರ್ ಅವರ ಕೈಯಿಂದ ಪದವಿ ಪಡೆದರು. ಇದಕ್ಕೆ ಸಂಬಂಧಿಸಿದ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ, ರಾಜ್ಯಪಾಲರ ಬಗ್ಗೆ ವಿದ್ಯಾರ್ಥಿನಿ ವರ್ತಿಸಿದ ರೀತಿಗೆ ಟೀಕೆ ವ್ಯಕ್ತವಾಗುತ್ತಿದೆ.

ಇದರ ಬಗ್ಗೆ ಮಾತನಾಡಿದ ವಿಶ್ವವಿದ್ಯಾಲಯದ ಹಿರಿಯ ಪ್ರಾಧ್ಯಾಪಕರು, "ಆಕೆ ಉದ್ದೇಶಪೂರ್ವಕವಾಗಿ ಹಾಗೆ ಮಾಡಿದ್ದಾಳೆಂದು ನಮಗೆ ನಂತರ ಅರಿವಾಯಿತು" ಎಂದು ಹೇಳಿದರು.

ಮನೋನ್ಮಣಿಯಂ ಸುಂದರನಾರ್ ವಿಶ್ವವಿದ್ಯಾಲಯದಲ್ಲಿ ಮೈಕ್ರೋಫೈನಾನ್ಸ್‌ನಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಜೀನ್ ಜೋಸೆಫ್, ರಾಜ್ಯಪಾಲರಿಂದ ಪದವಿ ಪಡೆಯಲು ಉದ್ದೇಶಪೂರ್ವಕವಾಗಿ ನಿರಾಕರಿಸಿದ್ದೇನೆ. ರಾಜ್ಯಪಾಲ ಆರ್.ಎನ್. ರವಿ ರಾಜ್ಯದ ಜನರ ವಿರುದ್ಧ ಇದ್ದಾರೆ. ಅವರು ತಮಿಳು ಜನರಿಗೆ ಏನನ್ನೂ ಮಾಡಿಲ್ಲ, ಅದಕ್ಕಾಗಿಯೇ ಅವರು ಅವರಿಂದ ಪದವಿ ಪಡೆಯಲು ಬಯಸಲಿಲ್ಲ ಎಂದು ಅವರು ಹೇಳಿದರು.

ರಾಜ್ಯಪಾಲರಿಂದ ಪದವಿ ಪಡೆಯಲು ನಿರಾಕರಿಸಿದ ವಿದ್ಯಾರ್ಥಿನಿ ಜೀನ್ ಜೋಸೆಫ್. ಡಿಎಂಕೆ ಪಕ್ಷದ ನಾಗರಕೋಯಿಲ್ ಉಪ ಕಾರ್ಯದರ್ಶಿ ಎಂ. ರಾಜನ್ ಅವರ ಪತ್ನಿ. ತಮಿಳುನಾಡು ರಾಜ್ಯಪಾಲರು ಮತ್ತು ಆಡಳಿತಾರೂಢ ಡಿಎಂಕೆ ಸರ್ಕಾರದ ನಡುವಿನ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ವೇದಿಕೆಯಲ್ಲಿ ಅವರು ಉದ್ದೇಶಪೂರ್ವಕವಾಗಿ ಈ ರೀತಿ ವರ್ತಿಸಿದ್ದಾರೆ ಎಂದು ತೋರುತ್ತದೆ.

ತಮಿಳುನಾಡು ಸರ್ಕಾರ ಮತ್ತು ರಾಜ್ಯದ ರಾಜ್ಯಪಾಲ ಆರ್.ಎನ್.ರವಿ ನಡುವೆ ಕೆಲವು ಸಮಯದಿಂದ ಭಿನ್ನಾಭಿಪ್ರಾಯಗಳಿರುವುದು ತಿಳಿದುಬಂದಿದೆ. ವಿಧಾನಸಭೆ ಅಂಗೀಕರಿಸಿದ ಮಸೂದೆಗಳನ್ನು ಯಾವುದೇ ಉತ್ತರ ನೀಡದೆ ತಮ್ಮ ಬಳಿಯೇ ಇಟ್ಟುಕೊಂಡಿದ್ದಕ್ಕಾಗಿ ತಮಿಳುನಾಡು ಸರ್ಕಾರ ರಾಜ್ಯಪಾಲ ಆರ್.ಎನ್.ರವಿ ಅವರನ್ನು ತೀವ್ರವಾಗಿ ಟೀಕಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net