

ಬೆಂಗಳೂರು ಸ್ನಾತಕೋತ್ತರ ಪದವಿ ವೈದ್ಯಕೀಯ, ಆಯುಷ್, ಎಂಬಿಎ, ಎಂಸಿಎ ಮತ್ತು ಎಂಇ ಕೋರ್ಸ್‌ಗಳ ಪ್ರವೇಶಾತಿಗೆ ವಿಕಲಚೇತನ ಅಭ್ಯರ್ಥಿಗಳ ಅಂಗವಿಕಲತೆಯನ್ನು ನ.5ರಂದು ವೈದ್ಯರ ಸಮಿತಿಯಿಂದ ಬೆಂಗಳೂರಿನ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಚೇರಿಯಲ್ಲಿ ತಪಾಸಣೆ ನಡೆಸಲಾಗುತ್ತದೆ.
ದೈಹಿಕ ವಿಕಲಚೇತನದ ವಿಶೇಷ ಪ್ರವರ್ಗದ ಕೋಟಾದಡಿ ಸೀಟನ್ನು ಕೋರಿರುವ ವಿದ್ಯಾರ್ಥಿಗಳು ವೈದ್ಯಕೀಯ ಪರೀಕ್ಷೆಗೆ ಕಡ್ಡಾಯವಾಗಿ ಹಾಜರಾಗಬೇಕಾಗುತ್ತದೆ. ವೈದ್ಯಕೀಯ ಸಮಿತಿಯು ಪರಿಶೀಲಿಸಿ ನೀಡುವ ವಿಕಲಚೇತನ ಅರ್ಹತೆ ವಿಷಯದಲ್ಲಿ ವೈದ್ಯಕೀಯ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ ಎಂದು ಕೆಇಎ ತಿಳಿಸಿದೆ.
ಕಡ್ಡಾಯವಾಗಿ ತರಬೇಕಾದ ದಾಖಲೆಗಳು:
ತಪಾಸಣೆಗೆ ಹಾಜರಾಗುವ ವೇಳೆ ಕೋರ್ಸ್ ಪ್ರವೇಶಕ್ಕೆ ಅಂತಿಮವಾಗಿ ಸಲ್ಲಿಸಿರುವ ಪ್ರತಿ, ಪ್ರಾಧಿಕಾರದಿಂದ ನೀಡಿರುವ ಪ್ರವೇಶ ಪತ್ರ, ಸ್ಕೋರ್ ಕಾರ್ಡ್ ಮತ್ತು ಪ್ರವೇಶ ಪತ್ರ, ಯುಡಿಐಡಿ ಕಾರ್ಡ್, ಮಾನ್ಯತೆ ಹೊಂದಿರುವ ಗುರುತಿನ ಚೀಟಿ, ವೈದ್ಯಕೀಯ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ತರುವಂತೆ ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಎಚ್. ಪ್ರಸನ್ನ ತಿಳಿಸಿದ್ದಾರೆ.