ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆ! ಇನ್ನಷ್ಟು ಇಳಿಯುವ ಸಾಧ್ಯತೆ..!

Petrol
Petrol Bunk
Published on

ನವದೆಹಲಿ: ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆಯಲ್ಲಿ ಏರಿಕೆ ಕಂಡು ಹೈರಾಣಾಗಿದ್ದ ವಾಹನ ಸವಾರರಿಗೆ ಇದು ಶುಭ ಬುಧವಾರ ಎನ್ನಬಹುದು. ಸತತ ಏರಿಕೆ ಕಂಡಿದ್ದ ಇಂಧನ ಬೆಲೆಯಲ್ಲಿ ಇಂದು ಇಳಿಕೆ ಕಂಡುಬಂದಿದೆ.

ರಾಷ್ಟ್ರ ರಾಜಧಾನಿ ನವದೆಯಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆಯಲ್ಲಿ 18 ಪೈಸೆ ಮತ್ತು ಪ್ರತಿ ಲೀಟರ್​ ಡೀಸೆಲ್​ ಬೆಲೆಯಲ್ಲಿ 17 ಪೈಸೆ ಇಳಿಕೆ ಕಂಡುಬಂದಿದೆ. ಇದೀಗ ಒಂದು ಲೀಟರ್​ ಪೆಟ್ರೋಲ್​ ಮತ್ತು ಡೀಸೆಲ್​ ಬೆಲೆ ಕ್ರಮವಾಗಿ 90.99 ರೂಪಾಯಿ ಹಾಗೂ 81.30 ರೂಪಾಯಿಯಾಗಿದೆ. ಬೆಂಗಳೂರಿನಲ್ಲೂ 18 ಪೈಸೆ ಇಳಿಕೆಯಾಗಿದ್ದು, ಒಂದು ಲೀಟರ್​ ಪೆಟ್ರೋಲ್​ ಬೆಲೆ 94.04 ರೂಪಾಯಿಯಾಗಿದೆ. ಡೀಸೆಲ್​ ಬೆಲೆ 86.21 ರೂಪಾಯಿಯಾಗಿದೆ.

ಕಳೆದ 15 ದಿನಗಳಲ್ಲಿ ಅಂತಾರಾಷ್ಟ್ರೀಯ ಕಚ್ಚಾ ತೈಲದ ದರದಲ್ಲಿ ಸತತ ಇಳಿಕೆ ಕಂಡುಬಂದಿದೆ. ಕೇವಲ 15 ದಿನಗಳಲ್ಲಿ ಬ್ಯಾರೆಲ್​ಗೆ 71 ಡಾಲರ್​ ಇದ್ದ ಕಚ್ಚಾ ತೈಲದ ದರ 64 ಡಾಲರ್​ಗೆ ಇಳಿದಿದೆ. ಇದರಿಂದಾಗಿ ಸಾರ್ವಜನಿಕ ವಲಯದ ತೈಲ ಸಂಸ್ಥೆಗಳು ಪೆಟ್ರೋಲ್​ ಮತ್ತು ಡೀಸೆಲ್​ ದರ ಇಳಿಸಲು ಹೆಚ್ಚಿನ ಅವಕಾಶ ಸಿಕ್ಕಿರುವುದಾಗಿ ಹೇಳಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net