ಅಪರೂಪದ ಕಾಯಿಲೆಯಿಂದ ಬಳಲುತ್ತಿರುವ ಪರ್ವೇಜ್ ಮುಷರಫ್ ಸ್ಥಿತಿ ಗಂಭೀರ

Musharaf
Published on

ದುಬೈ: ಕಳೆದ ವಾರಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪಾಕಿಸ್ತಾನದ ಮಾಜಿ ಅಧ್ಯಕ್ಷ ಫರ್ವೆಜ್​ ಮುಷರಫ್​​​ ಗಂಭೀರ ಸ್ಥಿತಿಯಲ್ಲಿದ್ದಾರೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

ಈ ಕುರಿತು ಅವರ ಕುಟುಂಬ ಮೂಲಗಳು ಟ್ವೀಟ್​ ಮಾಡಿದ್ದು, ಮುಷರಫ್​​ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಸದ್ಯ ಅವರು ತುರ್ತು ನಿಗಾ ಘಟಕದಲ್ಲಿ ಇಲ್ಲ, ಆದರೆ ಗಂಭೀರ ಸಮಸ್ಯೆ ಇರುವುದರಿಂದ ವೈದ್ಯರಿಂದ ಚಿಕಿತ್ಸೆ ಮುಂದುವರಿದಿದೆ. ಅವರು ಗುಣಮುಖರಾಗುವುದು ಕಷ್ಟಸಾಧ್ಯ ಎಂದು ವೈದ್ಯರು ಹೇಳಿದ್ದಾರೆ ಎಂದು ಮುಷರಫ್​ ಅಧಿಕೃತ ಟ್ವೀಟ್​ ಮೂಲಕ ಮಾಹಿತಿ ನೀಡಿದ್ದಾರೆ.

ಅವರು ಅಮಿಲೋಯ್ಡೋಸಿಸ್​ ಎಂಬ ಸಮಸ್ಯೆಯಿಂದ ಬಳಲುತ್ತಿದ್ದು, ಇದು ದೇಹದ ಅಂಗಾಂಗಗಳಲ್ಲಿ ಅಸಹಜ ಪ್ರೋಟೀನ್​ ರಚನೆಯಿಂದ ಉಂಟಾಗುವ ಅಪರೂಪದ ಗಂಭೀರ ಕಾಯಿಲೆ ಇದಾಗಿದ್ದು, ಇದು ಹೃದಯ, ಮೆದುಳು, ಮೂತ್ರಪಿಂಡಗಳು, ಮತ್ತು ದೇಹದ ಇತರೆ ಅಂಗಾಂಗಗಳ ಮೇಲೆ ಪರಿಣಾಮ ಬೀರುತ್ತದೆ. ಸದ್ಯ ಈ ಸಮಸ್ಯೆಯಿಂದ ಬಳಲುತ್ತಿರುವ ಮುಷರಫ್​ ಆರೋಗ್ಯದಲ್ಲಿ ಮೂರು ವಾರಗಳಿಂದ ಚೇತರಿಕೆ ಕಾಣುತ್ತಿಲ್ಲ ಎಂದು ಹೇಳಲಾಗಿದೆ.

ದೇಶದ್ರೋಹ ಆರೋಪದ ಮೇಲೆ ಪಾಕಿಸ್ತಾನದ ತೊರೆದಿರುವ ಮುಷರಫ್​​​ ದುಬೈಯಲ್ಲಿ ನೆಲೆಸಿದ್ದಾರೆ. ಅಲ್ಲದೇ 2018ರಲ್ಲಿ ಈ ಕಾಯಿಲೆ ಇರುವುದು ಪತ್ತೆಯಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net