ಕ್ರೀಡಾಕೂಟದಿಂದ ವ್ಯಕ್ತಿತ್ವ ವಿಕಸನ

sgr
ಆನಂದಪುರದಲ್ಲಿ ಪ್ರಾರ್ಥನಾ ರಾಮಕೃಷ್ಣ ಶಾಲೆಯಲ್ಲಿ ಸಾಧಕ ವಿದ್ಯಾರ್ಥಿಗಳನ್ನು ಶಾಸಕ ಶಾಸಕ ಗೋಪಾಲಕೃಷ್ಣ ಬೇಳೂರು ಸನ್ಮಾನಿಸಿದರು. ದೇವರಾಜ್, ಮೋಹನ್, ಸಿರಿ ಜಾನ್, ಗಜೇಂದ್ರ ಇತರರಿದ್ದರು.
Published on

ಸಾಗರ : ಪ್ರತಿಭೆ ಅನಾವರಣಕ್ಕೆ ವೇದಿಕೆ ನಿರ್ಮಿಸಿಕೊಡುವ ಕೆಲಸ ಆಗಬೇಕು. ಈ ದಿಸೆಯಲ್ಲಿ ತಾಲೂಕಿನಲ್ಲಿ ಸಾಧನೆ ಮಾಡುವ ಎಲ್ಲ ಮಕ್ಕಳನ್ನು ಪ್ರೋತ್ಸಾಹಿಸುತ್ತ ಬರುತ್ತಿದ್ದೇವೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.

ಆನಂದಪುರದಲ್ಲಿ ಪ್ರಾರ್ಥನಾ ರಾಮಕೃಷ್ಣ ಶಾಲೆಯಿಂದ ಅಂತಾರಾಷ್ಟ್ರೀಯ ಮತ್ತು ರಾಜ್ಯ ಮಟ್ಟದಲ್ಲಿ ಸಾಧನೆ ಮಾಡಿರುವ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ರಾಮಕೃಷ್ಣ ಶಾಲೆ ವಿದ್ಯಾರ್ಥಿಗಳು ಛತ್ತೀಸ್‌ಗಢದಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ. ಇದು ನಮ್ಮ ತಾಲೂಕಿಗೆ ಹೆಮ್ಮೆಯ ಸಂಗತಿ. ಶಿಕ್ಷಣದ ಜತೆ ಕ್ರೀಡೆ, ಇನ್ನಿತರೆ ಕ್ರಿಯಾಶೀಲ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು. ಪಠ್ಯೇತರ ಚಟುವಟಿಕೆಗಳು ಮಕ್ಕಳ ವ್ಯಕ್ತಿತ್ವ ರೂಪಿಸಲು ಪೂರಕವಾಗಿರುತ್ತವೆ ಎಂದು ಹೇಳಿದರು.

ರಾಮಕೃಷ್ಣ ವಿದ್ಯಾಸಂಸ್ಥೆ ಸಂಸ್ಥಾಪಕ ದೇವರಾಜ್, ಮೋಹನ್, ಸಿರಿ ಜಾನ್, ಗಜೇಂದ್ರ, ಅಶ್ವಿನ್, ಉಮೇಶ್, ಜಗನ್ನಾಥ್, ಬಿ.ಡಿ.ರವಿಕುಮಾರ್, ಬಿ.ಟಾಕಪ್ಪ, ಯುವರಾಜ ಕಂಬಳಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net