

ನವದೆಹಲಿ: ನೇಣುಗಂಬಕ್ಕೆ ಹಾಕುವವರಿಗೆ ಒಂದು ಸಲ ಕೊನೆಯ ಆಸೆ ಏನು ಎಂದು ಕೇಳುತ್ತಾರೆ. ಆದರೆ ಸ್ವತಃ ನೇಣು ಹಾಕಿಕೊಳ್ಳುವವರು ತಮ್ಮ ಕೊನೆಯ ಆಸೆ ಏನಾದರೂ ಇದ್ದರೆ ಡೆತ್ನೋಟ್ನಲ್ಲಿ ಬರೆದಿಟ್ಟು ಸಾಯುತ್ತಾರೆ. ಹಾಗೆ ತನ್ನ ಕೊನೆಯ ಆಸೆಯೊಂದನ್ನು ಬರೆದಿಟ್ಟು ವ್ಯಕ್ತಿಯೊಬ್ಬ ಸಾವಿಗೆ ಶರಣಾಗಿದ್ದಾನೆ.
ಅಷ್ಟಕ್ಕೂ ಆತ ಡೆತ್ನೋಟ್ ಬರೆಯಲು ಬಳಸಿದ ಕಾಗದವೇ ಗಮನ ಸೆಳೆದಿದೆ. ಏಕೆಂದರೆ ನೇಣು ಹಾಕಿಕೊಂಡು ಮೃತಪಟ್ಟ ಈ ವ್ಯಕ್ತಿಯ ಕಿಸೆಯಲ್ಲಿ ಬ್ಯಾಂಕ್ ಪಾಸ್ಬುಕ್ ಹಾಗೂ ಪೆನ್ ಪತ್ತೆಯಾಗಿದೆ. ಅದರಲ್ಲೂ ಆತ ಪಾಸ್ಬುಕ್ ಮೇಲೇ ಡೆತ್ನೋಟ್ ಬರೆದಿಟ್ಟು ನೇಣು ಹಾಕಿಕೊಂಡಿದ್ದಾನೆ. ಕುಟುಂಬವನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂಬ ತನ್ನ ಕೊನೆಯ ಆಸೆಯನ್ನು ಆತ ಡೆತ್ನೋಟ್ನಲ್ಲಿ ಹೇಳಿಕೊಂಡಿದ್ದು, ಆ ಆಸೆ ಈಡೇರಿಸುವಂತೆ ಡೆತ್ ಮೂಲಕ ಸೋದರ ಮಾವನಲ್ಲಿ ಕೋರಿಕೊಂಡಿದ್ದಾನೆ.
ನವದೆಹಲಿಯ ಆಜಾದ್ ಕಾಲನಿಯ ಬುದ್ಧ ವಿಹಾರ್ 2ನೇ ಹಂತದ ನಿವಾಸಿ, ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ಭದ್ರತಾ ಸಿಬ್ಬಂದಿ ಆಗಿದ್ದ ಸುಬೋಧ್ (40) ದೆಹಲಿ ರೋಹಿಣಿ ಏರಿಯಾದ ಟಿ ಪಾಯಿಂಟ್ನ ಪಾರ್ಕ್ನಲ್ಲಿನ ಮರಕ್ಕೆ ನೇಣು ಹಾಕಿಕೊಂಡು ಆತ್ಯಹತ್ಯೆ ಮಾಡಿಕೊಂಡಿದ್ದಾನೆ. ದೆಹಲಿ ಪೊಲೀಸರು ಆತ್ಮಹತ್ಯೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. (ಏಜೆನ್ಸೀಸ್)