ನನ್ನ ಹೆಂಡ್ತಿಗೆ ಇಷ್ಟವಾಗುವ ಸೀರೆಯೇ ಇಲ್ಲ..ಬಟ್ಟೆ ಅಂಗಡಿ ಸಿಬ್ಬಂದಿಗೆ ಹಿಗ್ಗಾಮುಗ್ಗಾ ಥಳಿಸಿದ ಪತಿ

sirsi
Published on

ಶಿರಸಿ: ಪತ್ನಿಗೆ ಸೀರೆ ಇಷ್ಟವಾಗದ ಹಿನ್ನೆಲೆಯಲ್ಲಿ ಪತಿ ಅಂಗಡಿ ಮಾಲೀಕನಿಗೆ ಬೈದು ಹಲ್ಲೆ ಮಾಡಿರುವ ಘಟನೆ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರದ ಸಿಪಿ ಬಜಾರದಲ್ಲಿ ನಡೆದಿದೆ.

ಮಹಮ್ಮದ್ ಹಲ್ಲೆ ಮಾಡಿರುವ ವ್ಯಕ್ತಿ. ಮಹಮ್ಮದ್ ಹಲ್ಲೆ ಮಾಡಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಡೆದಿದ್ದೇನು?: ಶಿರಸಿಯ ನೆಹರುನಗರ ನಿವಾಸಿಯಾಗಿರುವ ಮಹಮ್ಮದ್​ ಕುಟುಂಬದೊಂದಿಗೆ ಫೆ.24 ರಂದು ಸಿಪಿ ಬಜಾರ್​​ನಲ್ಲಿರುವ ಸಾಗರ ಬಟ್ಟೆ ಅಂಗಡಿಗೆ ಬಂದು ಬಟ್ಟೆ ಖರೀದಿ ಮಾಡಿಕೊಂಡು ಹೋಗಿದ್ದಾನೆ. ಮಹ್ಮಮ್ಮದ್​ ತೆಗೆದುಕೊಂಡು ಹೋದ ಸೀರೆ  ಪತ್ನಿಗೆ ಇಷ್ಟವಾಗಿಲ್ಲ. ಮಹ್ಮಮದ್​ ತನ್ನ ಗೆಳೆಯ ಸರ್ಪರಾಜ್ ಎಂಬುವನನ್ನು ಕರೆದುಕೊಂಡು ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿ, ಅಗಡಿ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಈ ದಿವ ನೀವು ಉಳಿದುಕೊಂಟಿದ್ದೀರಿ ಇನ್ನೊಂದು ದಿನ ನೀವು ಇಲ್ಲಿ ಹೇಗೆ ಅಂಗಡಿ ನಡೆಸುತ್ತೀರಿ ನಿಮಗೆ ಜೀವ ಸಹಿತ ಬಿಡುವುದಿಲ್ಲ ಅಂತ ಬೆದರಿಕೆ ಹಾಕಿದ್ದಾರೆ ಎಂದು ಎಫ್​ಐಆರ್​ನಲ್ಲಿ ದಾಖಲಾಗಿದೆ. ಶಿರಸಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net