ಅರೇರಿಯಾದಲ್ಲಿ ಪ್ರಧಾನಿ ಮೋದಿಯವರಿಂದ ಭರ್ಜರಿ ಪ್ರಚಾರ; ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ

Narendra Modi
Published on

ಫೋರ್ಬೆಸ್​ಗಂಜ್: ಕರೊನಾ ಸೋಂಕಿನ ನಡುವೆಯೂ ದೇಶದಲ್ಲಿ ಹಲವೆಡೆ ಉಪಚುನಾವಣೆಗಳು ನಡೆಯುತ್ತಿದ್ದು, ಸಂಬಂಧಪಟ್ಟ ಪ್ರಚಾರ ಸಭೆ, ರ‍್ಯಾಲಿ, ಮತದಾನದ ನೆಪದಲ್ಲಿ ಜನರು ಗುಂಪುಗೂಡುತ್ತಿದ್ದಾರೆ.

ಇಂದು ಪ್ರಧಾನಿ ನರೇಂದ್ರ ಮೋದಿಯವರು ಬಿಹಾರದ ಅರೇರಿಯಾ ಜಿಲ್ಲೆಯಲ್ಲಿ, ಮೂರನೇ ಹಂತದ ಮತದಾನ ನಿಮಿತ್ತ ಪ್ರಚಾರ ಸಭೆ ನಡೆಸಿದ್ದಾರೆ. ಇಂದು 17 ಜಿಲ್ಲೆಗಳ 94 ವಿಧಾನಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.

ಕರೊನಾ ಹಿನ್ನೆಲೆಯಲ್ಲಿ ಮತಗಟ್ಟೆಗಳಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಆದರೆ ಈ ರಾಜಕೀಯ ಪ್ರಚಾರ ಸಭೆಗಳಲ್ಲಿ ಮಾತ್ರ ಯಾವುದೇ ರೀತಿಯ ನಿಯಮ ಪಾಲನೆಯಾಗುತ್ತಿಲ್ಲ. ಇಂದು ನರೇಂದ್ರ ಮೋದಿಯವರ ರ್ಯಾಲಿಯಲ್ಲಂತೂ ಕರೊನಾ ನಿಯಂತ್ರಣ ನಿಯಮಗಳು ಸಂಪೂರ್ಣವಾಗಿ ಉಲ್ಲಂಘನೆಯಾಗಿವೆ. ಜನರು ಒತ್ತೊತ್ತಾಗಿ ನಿಂತಿದ್ದಲ್ಲದೆ, ಕೆಲವರು ಮಾಸ್ಕ್​ ಕೂಡ ಧರಿಸಿ ಬಂದಿರಲಿಲ್ಲ. ಇನ್ನೂ ಕೆಲವರ ಮಾಸ್ಕ್​ ಗಡ್ಡದ ಮೇಲೆ ಬಂದು ಕುಳಿತಿತ್ತು ಹೊರತು ಮೂಗು, ಬಾಯಿ ಮುಚ್ಚಿರಲಿಲ್ಲ. ಇದನ್ನೂ ಓದಿ: ಯುವಕನನ್ನು ನಂಬಿ ಮೋಸ ಹೋದ ವಿಧವೆ; ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ

ಕರೊನಾ ವೈರಸ್​ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರವೇ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಇದೀಗ ಮೋದಿಯವರ ಪ್ರಚಾರ ಸಭೆಯಲ್ಲೇ ನಿಯಮಗಳು ಉಲ್ಲಂಘನೆಯಾಗಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಎದ್ದಿದೆ.

ಅರೇರಿಯಾದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ದೇಶದ ನಾಗರಿಕರನ್ನು ಬಹುಕಾಲದವರೆಗೆ ವಂಚಿಸಲು ಸಾಧ್ಯವಿಲ್ಲ. ಇದೀಗ ನೋಡಿ ಕಾಂಗ್ರೆಸ್​ ಪಕ್ಷವನ್ನು ಜನರು ಎಲ್ಲಿಟ್ಟಿದ್ದಾರೆಂದು...ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಆ ಪಕ್ಷದ ಕನಿಷ್ಠ 100 ಸಂಸದರೂ ಇಲ್ಲ. ಈಗಲೂ ಜನರು ಕಾಂಗ್ರೆಸ್​ಗೆ ಶಿಕ್ಷೆ ನೀಡುತ್ತಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಭೀಮಾತೀರದ ಫೈರಿಂಗ್ ಪ್ರಕರಣ : ಸಾಹುಕಾರ ಕಾರ್ ಚಾಲಕ ಸಾವು

ಬಿಹಾರದಲ್ಲಿ ಆರ್​ಜೆಡಿ ಅಧಿಕಾರದಲ್ಲಿದ್ದಾಗಿನ ಪರಿಸ್ಥಿತಿಯನ್ನು ಒಮ್ಮೆ ನೆನಪಿಸಿಕೊಳ್ಳಿ. ಅವರ ಪಾಲಿಗೆ ಚುನಾವಣೆ ಎಂಬುದು ಒಂದು ತಮಾಷೆಯಾಗಿತ್ತು. ಹಿಂಸೆ, ಹತ್ಯೆಯಾಗಿತ್ತು...ಬಡವರ ಮತದಾನದ ಹಕ್ಕನ್ನೇ ಕಸಿದುಕೊಂಡಿದ್ದರು. ಆದರೆ ಎನ್​ಡಿಎ ಅದನ್ನು ವಾಪಸ್​ ಕೊಟ್ಟಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net