ಜನಪದ ಕಣ್ಮರೆಯಾಗದಂತೆ ನೋಡಿಕೊಳ್ಳಬೇಕು: ಮಂಜುನಾಥ್

purudal
ಪುರದಾಳು ಗ್ರಾಮದಲ್ಲಿ ಏರ್ಪಡಿಸಿದ್ದ ಗ್ರಾಮೀಣ ಹಾಗೂ ಜನಪದ ಆಟೋಟ ಸ್ಪರ್ಧೆಯನ್ನು ಡಿ.ಮಂಜುನಾಥ್ ಉದ್ಘಾಟಿಸಿದರು. ಬಿ.ಚಂದ್ರೇಗೌಡ, ಪ್ರದೀಪ್ ಎಸ್.ಹೆಬ್ಬೂರ್, ವೈ.ಕುಸುಮಾ, ವೀರಭದ್ರಪ್ಪ, ಮಹೇಶ್ ಹುರುಳಿ ಮುಂತಾದವರಿದ್ದರು.
Published on

ಶಿವಮೊಗ್ಗ: ಆಧುನಿಕತೆಯ ಅಂಧತ್ವದಲ್ಲಿ ಜನಪದ ಎಂಬ ಅದ್ಭುತ ಕಲೆಗಳು ಕಣ್ಮರೆಯಾಗದಂತೆ ನೋಡಿಕೊಳ್ಳಬೇಕು ಎಂದು ಕರ್ನಾಟಕ ಜಾನಪದ ಪರಿಷತ್ ಜಿಲ್ಲಾಧ್ಯಕ ಡಿ.ಮಂಜುನಾಥ್ ಹೇಳಿದರು.

ಜಾನಪದ ಪರಿಷತ್‌ನಿಂದ ಪುರದಾಳು ಗ್ರಾಪಂ ಸಹಯೋಗದಲ್ಲಿ ಪುರದಾಳು ಕಡ್ಲೆವಡ್ಡು ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಏರ್ಪಡಿಸಿದ್ದ ಜನಪದ ಆಟೋಟ ಸ್ಪರ್ಧೆ, ಜನಪದ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಜನಪದರು ಬಿಟ್ಟು ಹೋದ ಕಲೆ, ಆಟಗಳನ್ನು ಹೊಸತಲೆಮಾರಿಗೆ ತಲುಪಿಸುವ ಪ್ರಯತ್ನವಾಗಿ ಈ ಕಾರ್ಯಕ್ರಮ ರೂಪಿಸಲಾಗಿದೆ ಎಂದರು.

ಅಂಕಣಕಾರ ಬಿ.ಚಂದ್ರೇಗೌಡ ಮಾತನಾಡಿ, ಅತಿಯಾದ ಇಂಗ್ಲೀಷ್ ಓಲೈಕೆ ಗ್ರಾಮೀಣ ಭಾಷೆಗಳಿಗೆ ಕುತ್ತು ತಂದಿದೆ. ಕ್ರಿಕೆಟ್ ಗ್ರಾಮೀಣ ಜನಪದ ಕ್ರೀಡೆಯನ್ನು ಹಾಳುಮಾಡುತ್ತಿದೆ. ಮಕ್ಕಳ ಆಟವನ್ನು ಮೊಬೈಲ್ ಕಿತ್ತುಕೊಂಡಿದೆ. ಮಕ್ಕಳಿಗೆ ಒಳ್ಳೆಯ ಆರೋಗ್ಯ ಬೇಕೆಂದರೆ ಆಟ ಬಹಳ ಮುಖ್ಯ ಎಂದು ಹೇಳಿದರು.

ಗ್ರಾಪಂ ಸದಸ್ಯರಾದ ಭಾರತಿ ನಾಗರಾಜ್, ವೈ.ಕುಸುಮಾ, ಮಹೇಶ್ ಹುರುಳಿ, ವೀರಭದ್ರಪ್ಪ ಮಾತನಾಡಿದರು. ಗ್ರಾಪಂ ಸದಸ್ಯ ಪ್ರದೀಪ್ ಎಸ್.ಹೆಬ್ಬೂರ್ ಅಧ್ಯಕ್ಷತೆ ವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net