ಕೊಲ್ಕತ್ತಾದ ಆಗಸದಲ್ಲಿ ನಿಗೂಢ ಬೆಳಕು ಗೋಚರ: ಜಾಲತಾಣದಲ್ಲಿ ಫೋಟೋ ಹಾಕಿ ತರೇಹವಾರಿ ಚರ್ಚೆ… ಅಸಲಿಗೆ ಅದೇನು ಗೊತ್ತಾ?

Indias nuclear missile Agni V
Published on

ನವದೆಹಲಿ: ಕೊಲ್ಕತ್ತಾದ ಆಗಸದಲ್ಲಿ ನಿಗೂಢ ರೀತಿಯ ಬೆಳಕು ಗೋಚರಿಸಿದ್ದು, ಭಯಗೊಂಡ ಸಾರ್ವಜನಿಕರು ತರೇಹವಾರಿ ಚರ್ಚೆ ನಡೆಸುತ್ತಿದ್ದಾರೆ. ಅನ್ಯಲೋಕದ ವಿಮಾನವೇ? ಉಲ್ಕೆಗಳೇ, ಧೂಮಕೇತುವೇ? ಹಾರುವ ವಸ್ತುಗಳೇ... ಯಾವುದೆಂದು ನಮಗೆ ತಿಳಿಯುತ್ತಿಲ್ಲ. ಯಾವುದೇ ಶಬ್ದವಿಲ್ಲ, ಆಕಶದಲ್ಲಿ ಏನೋ ಹೊತ್ತಿಕೊಂಡು ಉರಿದಂತೆ ಪ್ರಕಾಶಮಾನ ಬೆಳಕು ಮಾತ್ರು ಕಾಣಿಸಿದೆ.. ಇದ್ಹೇನೆಂದು ತಿಳಿಸಿ ಎಂದು ಫೋಟೋ ಸಹಿತ ಟ್ವೀಟ್​ ಮಾಡಿ ನಾಸಾ, ಇಸ್ರೋಗೆ ಟ್ಯಾಗ್​ ಮಾಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್​ ಆಗಿದ್ದು, ನಾನೂ ಆಗಸದಲ್ಲಿ ಈ ಬೆಳಕನ್ನು ನೋಡಿದೆ. ಭಯವಾಯ್ತು ಎಂದು ಹಲವರು ಕಮೆಂಟ್​ ಮಾಡಿದ್ದಾರೆ. ಆಕಾಶದಲ್ಲಿ ಚಲಿಸುತ್ತಿದ್ದ ಪ್ರಕಾಶಮಾನ ಮಿಂಚಿನಂತೆ ಕಂಡುಬಂದ ಬೆಳಕನ್ನ ಕಂಡವರ ಮನದಲ್ಲಿ ನೂರಾರು ಊಹೆಗಳು, ಪ್ರಶ್ನೆಗಳು ಮೂಡಿವೆ. ಆದರೆ, ಭಯಬೇಡ, ಆರಾಮಾಗಿರಿ. ಇದು ನೀವೊಂದುಕೊಂಡ ಹಾಗೇ ಅನ್ಯಗ್ರಹದ ವಿಮಾನವೂ ಅಲ್ಲ, ಉಲ್ಕೆಯೂ ಅಲ್ಲ. ಅನ್ಯಲೋಕದ ವಿಮಾನಗಳು ಅಸ್ತಿತ್ವದಲ್ಲಿಲ್ಲ ಇಲ್ಲ.

ಆಗಸದಲ್ಲಿ ಕಂಡು ಬಂದ ಆ ದೃಶ್ಯ ಬ್ಯಾಲಿಸ್ಟಿಕ್ ಕ್ಷಿಪಣಿ ಅಗ್ನಿ-ವಿ ಉಡಾವಣೆಯದ್ದು! ಒಡಿಶಾ ಕರಾವಳಿಯ ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ಪರೀಕ್ಷಾರ್ಥವಾಗಿ ಈ ಕ್ಷಿಪಣಿಯನ್ನು ಯಶಸ್ವಿಯಾಗಿ ಉಡಾಯಿಸಲಾಗಿತು. ಉಡಾವಣೆ ಮಾಡಿದ ಕೆಲವೇ ಕ್ಷಣಗಳಲ್ಲಿ ಉಲ್ಕೆಯಂತೆಯೇ ಉರಿಯುತ್ತಿರುವ ಬಾಲ ಹೊಂದಿರುವ ಪ್ರಕಾಶಮಾನವಾದ ಪ್ಲೂಮ್‌ನಂತೆ ನಭಕ್ಕೆ ಕ್ಷಿಪಣಿ ಹಾರಿದ್ದು, ಈ ದೃಶ್ಯ ಕಂಡ ಜನರು ಇದೇನೆಂದು ತಿಳಿಯದೆ ಆತಂಕಭರಿತ ತರೇಹವಾರಿ ಚರ್ಚೆ ಮಾಡಿದ್ದಾರೆ.(ಏಜೆನ್ಸಿಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net