ಸಾಂತಾ ಕ್ಲಾಸ್​ ವೇಷದಲ್ಲಿದ್ದ ವ್ಯಕ್ತಿಯಿಂದ ಪಂಜುರ್ಲಿ ದೈವದ ಅಣಕ; ಸಿಟ್ಟಿಗೆದ್ದ ನೆಟ್ಟಿಗರು…

kantara christmas
Published on

ಉಡುಪಿ: ಕಾಂತಾರ ಸಿನಿಮಾ ಜಗತ್ತಿನಾದ್ಯಂತ ಪ್ರಚಾರ ಪಡೆದಿದ್ದು 400 ಕೋಟಿಗೂ ಮೀರಿ ಸಂಪಾದನೆ ಮಾಡಿದೆ. ಆದರೆ ಇದರ ಬೆನ್ನಲ್ಲೇ ನಟ ಚೇತನ್, ಮುಂತಾದವರು ಈ ಸಿನಿಮಾದ ಆಧಾರದ ಮೇಲೆ ವಿವಾದವನ್ನು ಎಬ್ಬಿಸಿದ್ದರು. ಅದಾದ ನಂತರ ವರಾಹ ರೂಪಂ ಹಾಡಿನ ವಿವಾದವೂ ನಡೆದು ಹೋಗಿ ಅದೂ ಅಂತ್ಯ ಕಂಡಿದೆ. ಇದೀಗ ಕ್ರಿಸ್​ಮಸ್​ ಸಂಭ್ರಮದಲ್ಲಿ ಸಾಂತಾ ಕ್ಲಾಸ್​ ವೇಷ ಧರಿಸಿದ್ದ ವ್ಯಕ್ತಿ ಹಾಗೂ ಇನ್ನೂ ಕೆಲವರು ದೈವವನ್ನು ಅಣಕಿಸಿದ್ದು ಹೊಸ ಸುದ್ದಿಗೆ ಕಾರಣರಾಗಿದ್ದಾರೆ.

ಸಾಂತಾ ಕ್ಲಾಸ್ ವೇಷದಲ್ಲಿದ್ದ ವ್ಯಕ್ತಿ ದೈವವನ್ನು ಅಣಿಕಿಸುವ ವಿಡಿಯೋ ವೈರಲ್ ಆಗಿದ್ದು ಸಾಕಷ್ಟು ಜನರು ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಕ್ರಿಸ್ಮಸ್ ಹಿನ್ನಲೆಯಲ್ಲಿ ಮನೆಮನೆಗೆ ಸಾಂತಾಕ್ಲಾಸ್ ವೇಷದಲ್ಲಿ ಭೇಟಿ ನೀಡುವ ಸಂದರ್ಭ ಈ ವಿಡಿಯೋವನ್ನು ಚಿತ್ರೀಕರಿಸಲಾಗಿತ್ತು. ಈ ವಿಡಿಯೋದಲ್ಲಿ ಕಾಂತಾರ ಚಲನಚಿತ್ರದಲ್ಲಿನ ದೃಶ್ಯದಂತೆಯೇ ಸಾಂತಾಕ್ಲಾಸ್ ವೇಷಧಾರಿ ದೈವದ ಅನುಕರಣೆ ಮಾಡಿದ್ದಾನೆ.

ಸದ್ಯ ವಿಡಿಯೋ ಕುರಿತು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದ್ದು ಸಾಂತಾಕ್ಲಾಸ್ ವೇಷದಲ್ಲಿ ದೈವ ನಿಂದನೆ ಮಾಡಲಾಗಿದೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. 'ಕರಾವಳಿಯ ದೈವಾರಾಧನೆ ಕುರಿತ ಯಾವುದೇ ಹಾಸ್ಯ ಸಹಿಸುದಿಲ್ಲಾ. ಇದು ಅಕ್ಷೇಪಾರ್ಹ. ದೈವವನ್ನು ಅಣುಕಿಸುವ ವಿಡಿಯೋ ಮಾಡುವವರ ವಿರುದ್ದ ಕ್ರಮ ಕೈಗೊಳ್ಳಲು ಅನೇಕರು ಆಗ್ರಹಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net