ಮೋದಿ ನೋಡಲು ರಸ್ತೆಯುದ್ದಕ್ಕೂ ಜನವೋ ಜನ

pm modi vist shimogga
ಶಿವಮೊಗ್ಗ ಬಿ.ಎಚ್.ರಸ್ತೆಯಲ್ಲಿ ಮೋದಿ ವೀಕ್ಷಿಸಲು ರಸ್ತೆ ಬದಿ ನಿಂತಿದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು.
Published on

ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರನ್ನು ನೋಡಲು ಮಾರ್ಗದುದ್ದಕ್ಕೂ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಮೊಬೈಲ್‌ನಲ್ಲಿ ಮೋದಿ ವಿಡಿಯೋ ಚಿತ್ರೀಕರಿಸಿಕೊಂಡು ಸಂಭ್ರಮಿಸಿದರು.

ವಿಮಾನ ನಿಲ್ದಾಣದಿಂದ ಅಲ್ಲಮಪ್ರಭು ಮೈದಾನದವರೆಗೆ ಮೋದಿ ಕಾರಿನಲ್ಲಿ ಆಗಮಿಸಿದರು. ಅವರು ಸಾಗುವ ಮಾರ್ಗದಲ್ಲಿ ರಸ್ತೆಯ ಎರಡೂ ಬದಿಯಲ್ಲಿ ಜನ ನಿಂತಿದ್ದರು. ಮೋದಿ ಅವರಿದ್ದ ಕಾರು ಆಗಮಿಸುತ್ತಿದ್ದಂತೆ ಜನರು ಘೋಷಣೆ ಕೂಗಿದರು. ಮೋದಿಯತ್ತ ಕೈ ಬೀಸಿದರು. ಅತ್ತ ಮೋದಿಯೂ ಜನರತ್ತ ಕೈ ಬೀಸಿದರು.
ರಸ್ತೆಯ ಇಕ್ಕೆಲಗಳಲ್ಲಿ ನಿಂತಿದ್ದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟರು. ಬ್ಯಾರಿಕೇಡ್‌ಗಳನ್ನು ಅಳವಡಿಸಿದ್ದರೂ ಕೆಲವು ಕಡೆ ಜನರು ಬ್ಯಾರಿಕೇಡ್‌ನಿಂದ ಹೊರಬಂದು ನಿಂತಿದ್ದರು. ಅವರನ್ನು ನಿಯಂತ್ರಿಸಲು ಪೊಲೀಸರು ಪದೇಪದೆ ಮೈಕ್‌ನಲ್ಲಿ ಕೂಗುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net