ಬರ್ಮೀಸ್ ಹೆಬ್ಬಾವುಗಳನ್ನು ಕೊಲ್ಲುವ ಸ್ಪರ್ಧೆ-ಕೆನಡಾ, ಬೆಲ್ಜಿಯಂ, ಲಾಟ್ವಿಯಾದಿಂದ ಸ್ಪರ್ಧಿಸಿದ ಜನರು

florida converted
Published on

ಬರ್ಮೀಸ್ ಹೆಬ್ಬಾವುಗಳು ಭೂಮಿ ಮೇಲಿನ ಅತಿದೊಡ್ಡ ಹಾವುಗಳಲ್ಲಿ ಒಂದಾಗಿದೆ. ಅವು ಆಕ್ರಮಣಕಾರಿ ಜಾತಿಯದ್ದಾಗಿದೆ. ಫ್ಲೋರಿಡಾದಲ್ಲಿ ಈ ಹೆಬ್ಬಾವುಗಳನ್ನ ಕೊಲ್ಲಲು ಯಾವುದೇ ಲೈಸೆನ್ಸ್​​ ಬೇಕಾಗಿಲ್ಲ. ಈ ಹಿಂದಿನ ದಾಖಲೆಯ ಪ್ರಕಾರ, 2020ರಲ್ಲಿ ಫ್ಲೋರಿಡಾದ ಎವರ್​ಗ್ರೇಡ್ಸ್​​​ನಲ್ಲಿ ಹಿಡಿದ ಹೆಬ್ಬಾವು 18 ಅಡಿ 9 ಇಂಚು ಉದ್ದ ಮತ್ತು 104 ಕೆ.ಜಿ ತೂಕವನ್ನ ಹೊಂದಿತ್ತು. ಫ್ಲೋರಿಡಾದ ಎವರ್ಗ್ಲೇಡ್ಸ್ ರಾಷ್ಟ್ರೀಯ ಉದ್ಯಾನವನದಲ್ಲಿ ಈ ಬರ್ಮಿಸ್​​ ಹೆಬ್ಬಾವುಗಳು ಹೆಚ್ಚಾಗಿ ಕಂಡು ಬಂದಿದ್ದು, ಅವುಗಳು ಸಿಕ್ಕ ಸಿಕ್ಕ ಹಕ್ಕಿ, ವನ್ಯ ಜೀವಗಳ ನಾಶ ಮಾಡುವುದರಲ್ಲಿ ತೊಡಗಿದ್ದವು.

ಇನ್ನು ಈ ಬರ್ಮಿಸ್​​ ಪೈತನ್​ಗಳು ಎವರ್​ಗ್ಲೇಡ್​​ ಉದ್ಯಾನವನವನ್ನೇ ಆವರಿಸಿಕೊಂಡು ಬಿಡುತ್ತೆ ಎಂಬ ಆತಂಕವೂ ಜನರಲ್ಲಿ ಮನೆ ಮಾಡಿತ್ತು. ಇದರಿಂದಾಗಿ ದಕ್ಷಿಣ ಫ್ಲೋರಿಡಾದ ಸ್ಥಳೀಯ ವನ್ಯಜೀವಿಗಳ ಸರ್ವನಾಶವೂ ಆಗಬಹುದೆಂದು ಜನರು ಹೆದರಿದ್ದರು. ಆದ್ದರಿಂದ ಅಲ್ಲಿನ ಸರ್ಕಾರ ಯಾವುದೇ ಲೈಸೆನ್ಸ್​ ಇಲ್ಲದೆಯೇ ಈ ಬರ್ಮಿಸ್​ ಹಾವುಗಳನ್ನ ಕೊಲ್ಲಬಹುದು ಎಂಬ ಆದೇಶವನ್ನ ಹೊರಡಿಸಿದೆ. ಅಂತೆಯೇ ಫ್ಲೋರಿಡಾದಲ್ಲಿ ಪ್ರತೀ ವರ್ಷವೂ ಬಹುದೊ0ಡ್ಡ ಮಟ್ಟದಲ್ಲಿ 'ಬರ್ಮಿಸ್​​​ ಪೈತನ್​​ ಕಿಲ್ಲಿಂಗ್​​ ಕಾಂಟೆಸ್ಟ್​​ಗಳನ್ನ ಪ್ರತೀ ವರ್ಷ 10 ದಿನಗಳ ಕಾಲ ನಡೆಸಲಾಗುತ್ತೆ.


ಹೆಬ್ಬಾವುಗಳನ್ನ ಕೊಲ್ಲವ ಕಾಂಟೆಸ್ಟ್​​
ಈ ವರ್ಷವೂ ಕೂಡಾ ಪೈತನ್​ ಕಿಲ್ಲಿಂಗ್​ ಕಾಂಟೆಸ್ಟನ್ನ ಫ್ಲೊರಿಡಾದಲ್ಲಿ ಹಮ್ಮಿಕೊಳ್ಳಲಾಗಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾಂಟೆಸ್ಟ್​​​ನಲ್ಲಿ ಭಾಗವಹಿಸಿದ್ದಾರೆ,10 ದಿನ ನಡೆಯುವಂತಹ ಈ ಸ್ಪರ್ಧೆಯಲ್ಲಿ ಅತೀ ಹೆಚ್ಚು ಹೆಬ್ಬಾವುಗಳನ್ನ ಹಿಡಿದು ಕೊಲ್ಲುವಂತವರು ಸ್ಪರ್ಧೆಯ ವಿಜೇತರಾಗುತ್ತಾರೆ.


ಈ ಸ್ಪರ್ಧೆಯಲ್ಲಿ ಭಾಗವಹಿಸಿದ 22 ವರ್ಷದ ಯುವಕನೋರ್ವ ನನ್ನ ಬೇಸಿಗೆಯ ರಜದಲ್ಲಿ ಈ ಕಾಂಟೆಸ್ಟ್​​ ಹಮ್ಮಿಕೊಂಡಿರೋದು ಖುಷಿ ತಂದಿದೆ. ಬೇಸಿಗೆ ವಿರಾಮದ ಸಮಯದಲ್ಲಿ ಹಾವುಗಳನ್ನು ಬೇಟೆಯಾಡುವುದೇ ನನ್ನ ರಜಾ ದಿನಗಳನ್ನ ಕಳೆಯುವ ಪ್ರಮುಖ ಯೋಜನೆಯಾಗಿದೆ. ಪ್ರಕೃತಿಯ ವಿನಾಶಕ್ಕೆ ಕಾರಣವಾಗುತ್ತಿರುವ ಈ ಹೆಬ್ಬಾವನ್ನ ಕೊಲ್ಲುವ ವಿಚಾರದಲ್ಲಿ ತಪ್ಪೇ ಇಲ್ಲ ಡೆಂದು ಹೇಳಿದ್ದಾನೆ
ಸ್ಪರ್ಧೆಯಲ್ಲಿ ಗೆದ್ದವಿರಿಗೆ 24 ಲಕ್ಷ ರೂಪಾಯಿ ಬಹುಮಾನ


ವಿಶೇಷ ಅಂದ್ರೆ ಈ ಸ್ಪರ್ಧೆಯಲ್ಲಿ ಹೆಚ್ಚು ಹೆಬ್ಬಾವುಗಳನ್ನ ಕೊಂದು ಪ್ರಥಮ ಸ್ಥಾನ ಪಡೆದ ವಿಜೇತರಿಗೆ 24 ಲಕ್ಷ ರೂಪಾಯಿಯಷ್ಟು ಹಣವನ್ನ ಬಹುಮಾನವಾಗಿ ನೀಡಲಾಗುತ್ತೆ. ಇತ್ತೀಚಿನ ಪೈಥಾನ್ ಚಾಲೆಂಜ್ ವಿಜೇತರು 41 ಹಾವುಗಳನ್ನು ವೇಗವಾಗಿ ಹಿಡಿದು ಕೊಂದು ಪ್ರಥಮ ಸ್ಥಾನವನ್ನ ಪಡೆದಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net