ಮದ್ಯದಂಗಡಿ ತೆರೆದಿದ್ದಕ್ಕೆ ಪಟಾಕಿ ಹೊಡೆದು ಸಂಭ್ರಮಿಸಿದರು!

liquor
Published on

ಕೊಯಮತ್ತೂರು : ಎರಡು ತಿಂಗಳ ನಂತರ ಕೊಯಮತ್ತೂರಿನಲ್ಲಿ ಮದ್ಯದಂಗಡಿಗಳನ್ನು ತೆಗೆದ ಹಿನ್ನೆಲೆಯಲ್ಲಿ ಮದ್ಯಪ್ರೇಮಿಗಳು ಫುಲ್ ಖುಶ್​! ಹಲವರು ಈ ಕ್ರಮದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದು, ಮದ್ಯದಂಗಡಿಗಳ ಮುಂದೆ ಸಾಲುಗಟ್ಟಿದ್ದರು. ಕೆಲವರು ತಮ್ಮ ಈ ಸಂಭ್ರಮವನ್ನು ಅಂಗಡಿಗಳ ಮುಂದೆ ಪಟಾಕಿ ಹೊಡೆಯುವ ಮೂಲಕ ಆಚರಿಸಿದರು ಎಂದು ಇಂಡಿಯ ಟುಡೇ ವರದಿ ಮಾಡಿದೆ.

ಕರೊನಾ ಪ್ರಕರಣ ಸಂಖ್ಯೆ ಕಡಿಮೆಯಾದ ತಮಿಳುನಾಡಿನ 27 ಜಿಲ್ಲೆಗಳಲ್ಲಿ ಜೂನ್ ಮಧ್ಯಭಾಗದಿಂದಲೇ ಲಾಕ್​ಡೌನ್​ ನಿರ್ಬಂಧಗಳನ್ನು ಸಡಿಲಿಸಿ, ಮದ್ಯದಂಗಡಿಗಳನ್ನು ಸೀಮಿತ ಅವಧಿಗೆ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಕರೊನಾ ಪ್ರಕರಣ ಹೆಚ್ಚಿದ್ದ ಕಾರಣಕ್ಕೆ ಕೊಯಮತ್ತೂರು ಸೇರಿದಂತೆ 11 ಜಿಲ್ಲೆಗಳಲ್ಲಿ ಪೂರ್ಣ ನಿರ್ಬಂಧಗಳನ್ನು ವಿಧಿಸಲಾಗಿತ್ತು.

ಇದೀಗ ರಾಜ್ಯದಲ್ಲಿ ಸೋಂಕಿನ ಪ್ರಮಾಣ ಇಳಿಕೆಯಾದ ಹಿನ್ನೆಲೆಯಲ್ಲಿ ಈ 11 ಜಿಲ್ಲೆಗಳಲ್ಲಿ ಕೂಡ ಇಂದಿನಿಂದ ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲಾಗುತ್ತಿದ್ದು, ಮದ್ಯದಂಗಡಿಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಭಾನುವಾರದಂದು ರಾಜ್ಯದಲ್ಲಿ ಒಟ್ಟು 3,867 ಹೊಸ ಕರೊನಾ ಪ್ರಕರಣಗಳು ದಾಖಲಾಗಿವೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net